ಉದಯವಾಹಿನಿ, ಯಾದಗಿರಿ: ಯಾದಗಿರಿಯ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಸರ್ಕಾರದ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಪಕ್ಷಗಳಲ್ಲಿನ ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ವಿಶ್ವಾಸದಿಂದ ಹೋಗದಿದ್ದರೆ ಸಮಸ್ಯೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಹಲವು ಮನಸ್ಥಿತಿಗಳು ಸೇರಿ ಅಧಿಕಾರ ಪಡೆಯಲು ಯತ್ನಿಸಿವೆ. ಹಲವರು ಸೇರಿ ಅಧಿಕಾರ ಪಡೆಯಲು ಮುಂದಾಗಿದ್ದಾರೆ. ಎಚ್ಚರಿಕೆ ಹೆಜ್ಜೆ ಅಗತ್ಯ. ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾರನ್ನೂ ಸಹ ನಂಬದಂತಹ ಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ. ಕೊಡೇಕಲ್ ಬಸವಣ್ಣನವರ ಈ ಭವಿಷ್ಯವಾಣಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ನಾಯಕರ ನಡುವೆಯೇ ಗೊಂದಲಗಳು ಏರ್ಪಟ್ಟಿವೆ. ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಅಧಿಕಾರ ಹಂಚಿಕೆ ವಿಚಾರವಾಗಿಯೂ ಚರ್ಚೆ ನಡೆದಿದೆ. ಈ ಮಧ್ಯೆ ಕೊಡೇಕಲ್ ಬಸವಣ್ಣನವರು ನುಡಿದಿರುವ ಭವಿಷ್ಯ ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!