ಉದಯವಾಹಿನಿ, ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಫರ್ನಿಚರ್ ಶೋರೂಂ ಸುಟ್ಟು ಕರಕಲಾಗಿರುವ ಘಟನೆ ಹೊರಮಾವು ಬಳಿಯ ಔಟರ್ ರಿಂಗ್ ರೋಡ್‍ನಲ್ಲಿ ತಡರಾತ್ರಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೆಲ ಹಾಗೂ ಮೊದಲನೇ ಮಹಡಿಯಲ್ಲಿದ್ದ ಪಿಠೋಪಕರಣದ ಅಂಗಡಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿ ಲಕ್ಷಾಂತರ ರೂ. ಮೌಲ್ಯದ ಪಿಠೋಪಕರಣಗಳು ಹಾಗೂ ದಾಖಲೆಗಳು ಸುಟ್ಟು ಕರಕಲಾಗಿವೆ.
ಶಂಕರ್ ಎಂಬುವವರಿಗೆ ಸೇರಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಕೋಚಿಂಗ್ ಸೆಂಟರ್ ಹಾಗೂ 3 ಮತ್ತು 4ನೇ ಅಂತಸ್ತಿನಲ್ಲಿ ಐಟಿ ಕಂಪನಿ ಇದ್ದು, ಅಲ್ಲಿಗೂ ಸಹ ಬೆಂಕಿ ಆವರಿಸಿ ಅಲ್ಲಿದ್ದ ಪಿಠೋಪಕರಣಗಳು, ದಾಖಲೆಗಳು ಸುಟ್ಟು ಬೆಂಕಿಗಾಹುತಿಯಾಗಿದೆ.
