ಉದಯವಾಹಿನಿ, ನವದೆಹಲಿ: ದೀಪಾವಳಿ ಸಂದರ್ಭ ರಾಷ್ಟ್ರರಾಜಧಾನಿಯಲ್ಲಿ ಮೂರು ದಿನ ಮದ್ಯ ಸದ್ದು ಮಾಡಿದೆ. ಎಣ್ಣೆಪ್ರಿಯರು 121 ಕೋಟಿ ರೂ.ಮೌಲ್ಯದ 64 ಲಕ್ಷ ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. ಈ ಹಿಂದೆ ದೀಪಾವಳಿ ಆಚರಣೆಗೆ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಮಾಂಸ, ಮದ್ಯಾರಾಧನೆ ಮಾಡುತ್ತಿರಲಿಲ್ಲ.
ಆದರೆ ಈಗ ದೇಶದೆಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಮಾಡುವ ಹಬ್ಬಗಳ ಸಂದರ್ಭದಲ್ಲೂ ಮಾಂಸ ಸೇವನೆ ಜತೆಗೆ ಮದ್ಯಪಾನ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ದೆಹಲಿಯಲ್ಲಿ ದೀಪಾವಳಿ ಸಂದರ್ಭದ ಒಂದು ವಾರದ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ಮದ್ಯದ ಬಾಟಲಿಗಳನ್ನು ಜನರು ಖರೀದಿಸಿದ್ದಾರೆ. ಮದ್ಯ ಮಾರಾಟದಿಂದ ಸರ್ಕಾರವು 234.15 ಕೋಟಿ ರೂಪಾಯಿಗಳಿಸಿದೆ.
ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ‘ದೆಹಲಿಯಲ್ಲಿ ಹೋಳಿ, ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದನ್ನು ವೈಯಕ್ತಿಕ ಬಳಕೆ ಮತ್ತು ಸಂಗ್ರಹಣೆಗೆ ಮಾತ್ರವಲ್ಲದೆ ಉಡುಗೊರೆಯಾಗಿ ನೀಡಲು ಸಹ ಖರೀದಿಸಲಾಗುತ್ತದೆ.
