ಉದಯವಾಹಿನಿ ಬೆಂಗಳೂರು : ನಿನ್ನೆ ಬಿಜೆಪಿಯ ವಿಪಕ್ಷ ನಾಯಕನಾಗಿ ಮಾಜಿ ಸಚಿವ ಆರ್ ಅಶೋಕ್ ನೇಮಕವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ನಲ್ಲಿ ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದು ಅದಕ್ಕೆ ಪಕ್ಷ ನಾಯಕ ಅಶೋಕ್ ಕೂಡ ಕ್ರಿಕೆಟ್ ನೀಡಿದ್ದಾರೆ.
ಕನಕಪುರದಲ್ಲಿ ಸೋತವರಿಗೆ ವಿಪಕ್ಷ ಸ್ಥಾನ ಎಂದು ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರಲ್ಲವೇ?
ಖರ್ಗೆ ಅವರನ್ನು ಎಐಸಿಸಿ ರಾಷ್ಟ್ರಾಧ್ಯಕ್ಷರಾಗಿ ಮಾಡಿದ್ದೀರಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ ನಾನು ಕನಕಪುರ ಕ್ಷೇತ್ರದಲ್ಲಿ 55,000 ಮತಗಳನ್ನು ಪಡೆದಿದ್ದೇನೆ ಆದರೆ ಸಿದ್ದರಾಮಯ್ಯ ಗಿಂತ 20 ಪಟ್ಟು ನಾನು ಮತ ಪಡೆದಿದ್ದೇನೆ ನಾನು ವಿರೋಧ ಪಕ್ಷದ ನಾಯಕನಾಗಬಾರದ? ಎಂದು ತಿಳಿಸಿದರು.
