ಉದಯವಾಹಿನಿ, ಬೆಂಗಳೂರು: ಕಟ್ಟಾಗಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಜೀವ ದಹನವಾಗಿರುವ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 7 ವರ್ಷದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಂಗಳೂರಿನ ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ವಿನೋದ್ ಹಾಗೂ ನಳಿನಾ ದಂಪತಿಯ ಪುತ್ರಿ ಆಕೃತಿ ಎಂಬ 7 ವರ್ಷದ ಮಗು ಮೃತ ದುರ್ದೈವಿ.
ಮಗು ತುಂಬಾ ಹಠ ಮಾಡುತ್ತಿದೆ ಎಂದು ಪಕ್ಕದ ಮನೆಯ ನಂಜುಂಡಪ್ಪ, ಪಲ್ಲವಿ ದಂಪತಿಯ ಮನೆಗೆ ಕಳುಸಿದ್ದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಮೃತ ಬಾಲಕಿಯ ಕೈ, ಕಾಲಿನ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಎಫ್ ಎಸ್ ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
