ಉದಯವಾಹಿನಿ, ವಿಜಯಪುರ: ಸಂಜೆವಾಣಿ ಪತ್ರಿಕೆಯ ಬಸವನಬಾಗೇವಾಡಿ ತಾಲ್ಲೂಕು ವರದಿಗಾರ ಅಬ್ದುಲ್ ರಜಾಕ್ ಬಾಲೇಸಾಬ ಶಿವಣಗಿ ಅವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾದರು.
ಅವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಬ್ದುಲ್ ರಜಾಕ್ ಶಿವಣಗಿ ಅವರು ಸಂಜೆವಾಣಿ ಪತ್ರಿಕೆಯ ಬಸವನಬಾಗೇವಾಡಿ ತಾಲ್ಲೂಕ ವರದಿಗಾರರು ಮತ್ತು ಏಜೆಂಟ್‍ರಾಗಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಲಿದ್ದರು. ಇಲ್ಲಿನ ಕೊಲ್ಹಾರ್ ರಸ್ತೆ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಪಂಪ್ ಹೌಸ್ ಹತ್ತಿರ ವಾಸವಾಗಿದ್ದರು.
ಬಸವನಬಾಗೇವಾಡಿಯಲ್ಲಿ ನಿನ್ನೆ ಅಂತ್ಯಕ್ರಿಯೆ ನೆರವೇರಿತು. ಅಬ್ದುಲ್ ಶಿವಣಗಿ ಅವರ ನಿಧನಕ್ಕೆ ಸಂಜೆವಾಣಿ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲೆಯ ಪತ್ರಕರ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
