ಉದಯವಾಹಿನಿ, ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ವಿಚಾರವಾಗಿ ಬಿಜೆಪಿ ಪಕ್ಷದಲ್ಲಿ ಒಡಕು ಮೂಡಿದೆ. ಸೋಮಣ್ಣ, ಬಸವನಗೌಡ ಯತ್ನಾಳ್,ಮುಂತಾದವರು ಸಿಡಿದೆದ್ದಿದ್ದಾರೆ.ಇನ್ನು ಸೋಮಣ್ಣ ಕೂಡ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ.ಮಾಜಿ ಸಚಿವ ವಿ.ಸೋಮಣ್ಣ, ಡಿಸೆಂಬರ್​ 6ರ ಬಳಿಕ ತನ್ನ ಮನಸ್ಸಿ‌ನ ಭಾವನೆ ತಿಳಿಸುವುದಾಗಿ ಹೇಳಿದರು.
ಡಿಸೆಂಬರ್ 6ರ ನಂತರ ಎಲ್ಲ ವಿವರವನ್ನು ಹೇಳುತ್ತೇನೆ. ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ.” ಎಂದರು.
” ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸಿಮೀತವಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ, ನಾನೂ ಯಾರನ್ನು ಸಂಪರ್ಕಿಸಿಲ್ಲ” ಎಂದರು.
ಈಗಾಗಲೇ ಸೋಮಣ್ಣ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!