ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದಂತ ಅನುಮತಿ ನಿರ್ಧಾರ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ಆರಂಭಗೊಳ್ಳುತ್ತಿದ್ದಂತೇ, ಹೈಕೋರ್ಟ್ ಗೆ ಸರ್ಕಾರದ ನಿರ್ಧಾರದ ಲಿಖಿತ ಪ್ರತಿಯನ್ನು ಎಜೆ ಶಶಿಕಿರಣ್ ಶೆಟ್ಟಿ ಸಲ್ಲಿಸಿದರು.
ಆ ಬಳಿಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಾದ-ಪ್ರತಿವಾದ ನಡೆದು, ಅಂತಿಮವಾಗಿ ಪಂಜಾಬ್ ಸರ್ಕಾರದ ಕೇಸ್ ಉಲ್ಲೇಖಿಸಿ, ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ವಾಪಾಸ್ ಪಡೆಯಲು ಅನುಮತಿಸಿತು. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ.
ಸರ್ಕಾರದ ಅನುಮತಿ ನಿರ್ಧಾರ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸಿಜೆ ಪಿ.ಬಿ ವರ್ಲೆ ಮತ್ತು ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ಆರಂಭಿಸಿತು.
ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಅಭಿಷೇಕ್ ಸಿಂಘ್ವಿ ಹಾಜರಿದ್ದರು. ತನ್ನ ವಾದವನ್ನು ಹೈಕೋರ್ಟ್ ನ್ಯಾಯಪೀಠದ ಮುಂದೆ ಇಟ್ಟಂತ ಅವರು, ಸರ್ಕಾರ ಒಮ್ಮೆ ನಿರ್ಧಾರ ಕೈಗೊಂಡ ನಂತ್ರ, ತನಿಖೆ ನಿಲ್ಲಬೇಕು ಎಂಬುದಾಗಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಆಗ ಹೈಕೋರ್ಟ್ ನ್ಯಾಯಮೂರ್ತಿಗಳು ಮೇಲ್ಮನವಿ ಮುಂದುವರೆಸುವ ಉದ್ದೇಶ ಇಲ್ವ? ಸರ್ಕಾರ ನಿರ್ಧಾರದಿಂದ ಮೇಲ್ಮನವಿ ಮುಂದುವರೆಸುವ ಉದ್ದೇಶವೇ ಇಲ್ವ? ಎಂಬುದಾಗಿ ಡಿಕೆಶಿ ಪರ ವಕೀಲರಿಗೆ ಪ್ರಶ್ನಿಸಿತು.
ಆಗ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನಾವು ಡಿಕೆ ಪರ ರಿಟ್ ಅರ್ಜಿ ಹಿಂಪಡೆಯಲು ನಿರ್ಧಿಸಿದ್ದೇವೆ. ರಿಟ್ ಅರ್ಜಿ ಮತ್ತು ರಿಟ್ ಮೇಲ್ಮನವಿ ಇತ್ಯರ್ಥ ಪಡಿಸಬೇಕು. ಸರ್ಕಾರದ ನಿರ್ಧಾರದ ಹಿನ್ನಲೆಯಲ್ಲಿ ಅರ್ಜಿ ಇತ್ಯರ್ಥ ಪಡಿಸಬೇಕು ಎಂಬುದಾಗಿ ಕೋರಿ ಕೊಂಡರು.
