ಉದಯವಾಹಿನಿ, ಭಾಲ್ಕಿ: ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹನುಮಾನ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಹನುಮಾನ ದೇವರ ಭಾವಚಿತ್ರದ ಮೆರವಣಿಗೆ ವೈಭವದಿಂದ ನೆರವೇರಿತು.
ಗ್ರಾಮದ ಸಂಗಮೇಶ್ವರ ಮಂದಿರ ಆವರಣದಲ್ಲಿ ಬುಧವಾರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಹನುಮಾನ ದೇವರ ಭಾವಚಿತ್ರದ ಜತೆಗೆ ಪ್ರವಚನ ನಡೆಸಿ ಕೊಡುತ್ತಿರುವ ಹಲಬರ್ಗಾ ರಾಚೋಟೇಶ್ವರ ಮಠದ ಹಾವಗಿಲಿಂಗೇಶ್ವರ ಸ್ವಾಮೀಜಿ ಅವರನ್ನು ಅಲಂಕೃತ ಸಾರೋಟಿಯಲ್ಲಿ ಮೆರವಣಿಗೆ ನಡೆಸಲಾಯಿತು.ಗ್ರಾಮದ ಪ್ರಮುಖ ರಸ್ತೆ, ಬೀದಿಯಲ್ಲಿ ಶ್ರದ್ಧೆ, ಭಕ್ತಿಯಿಂದ ಮೆರವಣಿಗೆ ಸಂಚರಿಸಿ ಹನುಮಾನ ದೇವರ ಮಂದಿರದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ನೂರಾರು ಮಹಿಳೆಯರು ಕುಂಭ ಕಳಸ ಹೊತ್ತ ಶಿಸ್ತಿನ ನಡಿಗೆ ಗಮನ ಸೆಳೆಯಿತು. ಯುವಕರು ದೇವರ ಭಕ್ತಿಗೀತೆ ಡಿಜೆ ಸೌಂಡ್‍ಗೆ ಹೆಜ್ಜೆ ಹಾಕಿದರು. ಶಾಲಾ ಮಕ್ಕಳು ಕೋಲಾಟದಲ್ಲಿ ಭಾಗಿಯಾಗಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಾಪಂ ಎಡಿ ಚಂದ್ರಶೇಖರ ಬನ್ನಾಳೆ, ಗ್ರಾಪಂ ಅಧ್ಯಕ್ಷ ಸಂತೋಷ ಮಾನಕಾರ, ರಮೇಶ ಪಂಚಾಳ, ಶಿವರಾಜ ಹಂಪಾ ಸೇರಿದಂತೆ ಗ್ರಾಮದ ಹಿರಿಯರು, ಪ್ರಮುಖರು, ಯುವಕರು ಹಾಜರಿದ್ದರು.
