ಉದಯವಾಹಿನಿ, ಕೋಲಾರ : ನಗರದಲ್ಲಿ ದಾಸ ಶ್ರೇಷ್ಟ ೫೩೬ನೇ ಕನಕದಾಸರ ಜಯಂತಿ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳ ಕುರುಬರ ಯುವಕ ಸಂಘಗಳು, ಸರ್ಕಾರಿ ವಿವಿಧ ಇಲಾಖೆಗಳು ಸರ್ಕಾರದ ಯೋಜನೆಗಳೊಂದಿಗೆ ಕನಕದಾಸರ ಭಾವಚಿತ್ರಗಳ ಪಲ್ಲಕ್ಕಿಗಳ ಮೆರವಣಿಗೆಯು ಹಬ್ಬದ ವಾತವರಣ ನಿರ್ಮಾಣ ಮಾಡಲಾಗಿತ್ತು,
ಯುವಕರ ತಂಡಗಳು ಹಲಗೆ, ತಮಟೆ ಬಡಿತಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹಾಕುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಡಿ.ಜೆ.ಸೌಂಡ್‌ನ ಹಾಡುಗಳು ಎಂಥವರನ್ನು ಕುಣಿತ ಹೆಜ್ಜೆಗಳನ್ನು ಹಾಕುವಂತೆ ಮಾಡಿತ್ತು. ನಗರದ ಪ್ರವಾಸಿ ಮಂದಿರದಿಂದ ಡೊಮ್ ಲೈಟ್ ಸರ್ಕಲ್.ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಎಂ.ಬಿ.ರಸ್ತೆ, ಮೆಕ್ಕೆ ಸರ್ಕಲ್. ಹಳೆ ಬಸ್ ನಿಲ್ದಾಣ, ಕಾಲೇಜು ರಸ್ತೆ, ಬಂಗಾರಪೇಟೆ ರಸ್ತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಸುಮಾರು ೪೦ಕ್ಕೂ ಹೆಚ್ಚು ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಪಾಲ್ಗುಂಡಿದ್ದವು.

Leave a Reply

Your email address will not be published. Required fields are marked *

error: Content is protected !!