ಉದಯವಾಹಿನಿ, ಗುಡಿಬಂಡೆ: ರಾಜ್ಯದಲ್ಲಿ ಚಿಕ್ಕ ತಾಲೂಕಾದ ಗುಡಿಬಂಡೆಯಲ್ಲಿ ಹಣ ಮಾಡೋಕೆ ಅಧಿಕಾರಿಗಳು ಬಂದಿದ್ದರೇ ಕೂಡಲೇ ವರ್ಗಾವಣೆ ಮಾಡಿಸಿಕೊಂಡು ಹೋಗಿಬಿಡಿ, ಜನರ ಸೇವೆ ಮಾಡೋ ಉದ್ದೇಶ ಇದ್ದರೇ ಮಾತ್ರ ತಾಲೂಕಿನಲ್ಲಿ ಇರಿ ಎಂದು ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ತುಂಬಾ ಬಡವರಿದ್ದಾರೆ. ಆರ್ಥಿಕ ಸಮಸ್ಯೆ ಹೆಚ್ಚಾಗಿರುತ್ತದೆ. ಚಿಕ್ಕ ತಾಲೂಕಿನಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಬಹುದು. ಆದರೆ ಈ ಭಾಗದಲ್ಲಿ ಕೆಲವರು ಜನರ ಕೆಲಸಗಳನ್ನು ಮಾಡಿಕೊಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೆಲವರು ದುಡ್ಡು ಮಾಡೋಕೆ ಬಂದಿರುತ್ತಾರೆ. ಅಂತಹ ಮನಸ್ಸಿರುವ ಅಧಿಕಾರಿಗಳು ಕೂಡಲೇ ವರ್ಗಾವಣೆ ಮಾಡಿಸಿಕೊಂಡು ಹೋಗಿಬಿಡಿ. ಇಲ್ಲೇ ಇರುವ ಉದ್ದೇಶವಿದ್ದರೇ ಜನರ ಸೇವೆ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಓವರ್ ಬ್ಲಾಸ್ಟಿಂಗ್ ಮಾಡುವ ಗಣಿಗಾರಿಕೆಗಳ ವಿರುದ್ದ ಕ್ರಮ ತೆಗೆದುಕೊಳ್ಳಿ: ತಾಲೂಕಿನ ದಪ್ಪರ್ತಿ ಗ್ರಾಮದ ಬಳಿ ಇರುವಂತಹ ಗಣಿಗಾರಿಕೆಯಲ್ಲಿ ಓವರ್ ಬ್ಲಾಸ್ಟಿಂಗ್ ಮಾಡುವ ಬಗ್ಗೆ ದೂರು ಬಂದಿದ್ದು, ಈ ಕುರಿತು ತಾಲೂಕು ದಂಡಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಓವರ್ ಬ್ಲಾಸ್ಟಿಂಗ್ ಮಾಡುವಂತಹವರ ವಿರುದ್ದ ಎಫ್.ಐ.ಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದರು.ಆಯಾ ಪಿ.ಹೆಚ್.ಸಿ ಕೇಂದ್ರಗಳಲ್ಲೇ ಮರಣೋತ್ತರ ಪರೀಕ್ಷೆ ಮಾಡಲು ಸೂಚನೆ: ವಿವಿಧ ಕಾರಣಗಳಿಂದ ಮೃತಪಟ್ಟ ಶವಗಳಿಗೆ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಮರಣೋತ್ತರ ಪರೀಕ್ಷೆ ಮಾಡಬೇಕಿದೆ. ಆದರೆ ಇತ್ತಿಚಿಗೆ ಈ ಕೆಲಸ ಆಗುತ್ತಿಲ್ಲ. ಇನ್ನೂ ಮುಂದೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಸಂಬAಧಪಟ್ಟ ವೈದ್ಯರಿಗೆ ಸೂಚನೆ ನೀಡಬೇಕೆಂದು ಟಿ.ಹೆಚ್.ಒ ಡಾ.ನರಸಿಂಹಮೂರ್ತಿಗೆ ಸೂಚನೆ ನೀಡಿದರು.
