ಉದಯವಾಹಿನಿ, ಕೆಜಿಎಫ್: ಗ್ರಾಂಡ್ ರೇಯಾನ್ ರೈನ್ಸ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟವನ್ನು ನಗರದ ಕಿಂಗ್ ಜಾರ್ಜಹಾಲ್ ಸಭಾಂಗಣದಲ್ಲಿ ಅಯೋಜಿಸಿದ್ದರು.
ಬೇಬಿ ಸಿಟ್ಟಿಂಗ್ ವಿಧ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಸಂತಸವನ್ನು ಪಟ್ಟು ಕುಣಿದಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಅಶ್ವತ್ ಮಕ್ಕಳು ಮನಸು ಕನ್ನಡಿಯಿದ್ದಂತೆ ಅವರುಗಳಿಗೆ ವಿಧ್ಯೆಯೊಂದಿಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡುವಂತೆ ಪೋಷಕರು ಪ್ರೋತ್ಸಹ ನೀಡಬೇಕು ಏಳೆ ವಯಸ್ಸಿನಲ್ಲೇ ಮಕ್ಕಳಿಗೆ ಅತಿ ಹೆಚ್ಚು ಒತ್ತಡವನ್ನು ಹಾಕಬಾರದು ಆಟವಾಡುವ ಸಂದರ್ಭದಲ್ಲಿ ಮಕ್ಕಳಿಗೆ ಆಟವಾಡಲು ಸಹಕರಿಸಬೇಕು ಮತ್ತು ವಿಧ್ಯೆ ಅಂದರೆ ಜೀವನದಲ್ಲಿ ಎಷ್ಟು ಮುಖ್ಯವಾಗಿರಲಿದೆ ಎಂಬುದನ್ನು ಅವರುಗಳಿಗೆ ತಿಳಿಯುವ ಹಾಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು. ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿ ವಿಜೇತರಾದ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿವತಿಯಿಂದ ಪ್ರಶಸ್ತಿಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಭಾಗವಹಿಸಿ ಮಕ್ಕಳೊಂದಿಗೆ ಎಂಜಯ್ ಮಾಡಿದರು.
ಈವೇಳೆ ಅಧ್ಯಕ್ಷ ಅಮರನಾಥ್, ಉಪಾಧ್ಯಕ್ಷ ತ್ಯಾಗರಾಜ್,ಶಾರದ, ಸಂಗೀತ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!