ಉದಯವಾಹಿನಿ, ಕೋಲಾರ: ವಿಶ್ವ ಏಡ್ಸ್ ದಿನದ ಪ್ರಯುಕ್ತ ಮೇಣದ ಬತ್ತಿಯೊಂದಿಗೆ ನಡಿಗೆ ಮುಖಾಂತರ ನಗರದ ಮಹಾತ್ಮ ಗಾಂಧಿ ಚೌಕದಿಂದ ಕಾಳಮ್ಮ ದೇವಿ ವೃತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ನಡಿಗೆ ಮುಖಾಂತರ ನಗರಾದ್ಯಂತ ೨೦೩೦ರ ವೇಳೆಗೆ ಕರ್ನಾಟಕ ರಾಜ್ಯವನ್ನು ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಈ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ. ಪ್ರಸನ್ನ ಕುಮಾರ್ ಅವರು ಚಾಲನೆ ನೀಡಿ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೋಲಾರ ಜಿಲ್ಲೆ ಇವರ ಸಹಯೋಗದಲ್ಲಿ ‘ವಿಶ್ವ ಏಡ್ಸ್ ದಿನ’-೨೦೨೩ ಇವರ ಸಹಯೋಗದಲ್ಲಿ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ, ರೇಣುಕಾದೇವಿ, ಐ.ಸಿ.ಟಿ.ಸಿ ಜಿಲ್ಲಾ ಮೇಲ್ವಿಚಾರಕರಾದ ಡಿ.ಎಂ. ಹೇಮಲತಾ, ಕಲಾವಿದರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!