ಉದಯವಾಹಿನಿ, ರಾಯಚೂರು: ತಾಲೂಕಿನ ಮನ್ಸಲಾಪೂರು ಗ್ರಾಮದಲ್ಲಿ ಸಿ.ಸಿ. ರಸ್ತೆಯ ಮೇಲೆ ಚರಂಡಿ ನೀರು ಹರಿದು ದುರ್ವಾಸನೆ ಬರುತ್ತಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗಿದ್ದು,ರಸ್ತೆ ಚರಂಡಿ ದುರಸ್ಥಿ ಮಾಡುವಲ್ಲಿ ಪಿಡಿಒ ಸಂಪೂರ್ಣ ನಿರ್ಲಕ್ಷ ವಹಿಸದ್ದು ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಇವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ವಾಲ್ಮೀಕಿ ವೃತ್ತದಿಂದ ಬಾಬು ಜಗಜೀವನರಾಂ ವೃತ್ತಕ್ಕೆ ಹೋಗುವ ರಸ್ತೆಯಾಗಿದ್ದು ಇದು ಮುಖ್ಯರಸ್ತೆಯಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ೭-೮ ವರ್ಷಗಳ ಹಿಂದೆ ಈ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ.
ಆದರೆ ಚರಂಡಿ ಕಾಲುವೆ ನಿರ್ಮಾಣ ಮಾಡದೇ ಇರುವುದರಿಂದ ಮನೆಗಳಿಂದ ಬಳಿಸಿದ ನೀರು ಮತ್ತು ಶೌಚಾಲಯದ ಹೊಲಸು ನೀರು ಸಿ.ಸಿ. ರಸ್ತೆಯ ಮೇಲೆ ನಿಂತಿದೆ. ಈ ನೀರು ಹರಿದುಹೋಗುವ ಯಾವುದೇ ವ್ಯವಸ್ಥೆ ಇರುವುದಿಲ್ಲ. ಚರಂಡಿ ನೀರು ಹರಿಯುವದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಎಂದು ದೂರಿದರು.
