
ಉದಯವಾಹಿನಿ, ಮಾನ್ವಿ: ತಾಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭವಾಗಲಿದೆ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಕ್ಲಾಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ಮುಖ್ಯಗುರುಗಳ ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಹರೀಶ್ ಹೇಳಿದರು.
ನಂತರ ಮಾತನಾಡಿ ಜೂನ್ ೧ರಿಂದ ಕಲಿಕಾ ವರ್ಷ ಪ್ರಾರಂಭವಾಗುವುದರಿಂದ ಗ್ರಾಮೀಣ ಭಾಗದ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡು ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ನೀಡುವ ಮೂಲಕ ಹಾಜರಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳಿಗೆ ಕಲಿಕೆಗೆ ಅಗತ್ಯವಾದ ಪಠ್ಯ ಪುಸ್ತಕಗಳನ್ನು ಇಲಾಖೆಯಿಂದ ಸರಬರಾಜಗಿದ್ದು ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ತಿಳಿಸಿದರು ನಂತರ
ಗ್ರಾಮೀಣ ಭಾಗದ ವಿವಿಧ ಶಾಲೆಗಳ ಮುಖ್ಯಗುರುಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸರ್ಕಾರಿ ಶಾಲೆಗಳ ಮುಖ್ಯಗುರುಗಳಾದ ಮುಸ್ಟೂರು ಶಾಲೆಯ ಮುಖ್ಯಗುರು ಹೆಚ್.ಟಿ.ಪ್ರಕಾಶಬಾಬು, ಸೀಕಲ್, ಶಾಲೆಯ ನರಸಯ್ಯಶೆಟ್ಟಿ, ಪರವೇಜ್, ಜಾವೀದ್, ಅರುಣಕುಮಾರ, ಮುತ್ತಣ್ಣ, ನರೇಶ ಯಡಿವಳ ಸೇರಿದಂತೆ ಇನ್ನಿತರರು ಇದ್ದರು.
