ಉದಯವಾಹಿನಿ, ಕಲಬುರಗಿ: ಶಾಲಾ ಶಿಕ್ಷಣ (ಪದವಿ ಪೂರ್ವ) ಶಿಕ್ಷಣ ಇಲಾಖೆಯು ಆಯೋಜಿಸಿದ ವಿಭಾಗ ಮಟ್ಟದ ಸಾಂಸ್ಕøತಿಕ ಚಟುವಟಿಕೆ ಸ್ಪರ್ಧೆ 2023. ಬಸವೇಶ್ವರ ಪದವಿ ಪೂರ್ವ ಕಾಲೇಜು ಬಸವಕಲ್ಯಾಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ದೆಯಲ್ಲಿ ಪ್ರಥಮ ಪಿ.ಯು ವಿದ್ಯಾರ್ಥಿ ಶಿವಸಾತ್ವಿಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಸಾಧನೆಗೆ ಎಸ್.ವಿ.ಪಿ ಟ್ರಸ್ಟ್ ನ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ ಹಾಗೂ ಕಾಲೇಜಿನ ಉಪ್ಯಾಸಕರು, ಸಿಬ್ಬಂಧಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದಲ್ಲಿ ಗೆದ್ದು ಬರಲೆಂದು ವಿದ್ಯಾರ್ಥಿಗೆ ಶುಭ ಕೋರಿದ್ದಾರೆ.
