ಉದಯವಾಹಿನಿ, ಬೀದರ : ತಾಲೂಕಿನ ಯದಲಾಪೂರ ಗ್ರಾಮದ ರೈತ ಚಂದ್ರಕಾಂತ ಶಿವರಾಜ ಇವರ ಭೂಮಿ ಸರ್ವೆ ನಂ. 154/3 ಭೂಮಿಯಲ್ಲಿ ಬೆಳೆದಿರುವ ಕಬ್ಬು ಬೆಳೆಯನ್ನು ಡಿ.4 ರಂದು ಮಧ್ಯಾಹ್ನ 1 ಗಂಟೆಗೆ ವಿದ್ಯುತ್ತ ಶಾರ್ಟ್ ಸರ್ಕಿಟ್‍ನಿಂದ 2 ಎಕರೆ ಬೆಳೆದಿರುವ ಬೆಳೆಯನ್ನು ಸಂಪೂರ್ಣ ಸುಟ್ಟ ಘಟನೆ ನಡೆದಿದೆ. 2-3 ಲಕ್ಷದವರೆಗೆ ಹಾನಿಯನ್ನುಂಟಾಗಿರುತ್ತದೆ ಎಂದು ಬೀದರ ನಗರದ ಗ್ರಾಮಿಣ ಪೆÇಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಯದಲಾಪೂರ ರೈತ ಚಂದ್ರಕಾಂತ ಶಿವರಾಜ ಅವರು ತಿಳಿಸಿದ್ದಾರೆ.
ಕಡು ಬಡವ ರೈತನಾಗಿದ್ದು ಕೂಡಲೇ ಅಗತ್ಯ ಪರಿಹಾರ ನೀಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
