
ಉದಯವಾಹಿನಿ, ಹಾಸನ: ಕಾಡಾನೆಗಳನ್ನು ಅಧಿಕಾರಿಗಳ ನಿರ್ಲಕ್ಷö್ದಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ದುರಂತ ಸಾವನ್ನಪ್ಪಿರುವ ಅರ್ಜುನ ಆನೆಯ ಸಾವಿಗೆ ನ್ಯಾಯ ಸಿಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಆಗ್ರಹಿಸಿದರು.
ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಆಯೋಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ ೯ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನು ಹೊತ್ತು ನಮ್ಮ ಸಾಂಸ್ಕೃತಿಕ ಪರಂಪೆಯನ್ನು ಸಾರಿದ್ದ ಅರ್ಜುನ ಸಾಕಾನೆಯನ್ನು ಕಾಡಾನೆಗಳ ಕಾರ್ಯಾಚರಣೆಗೆ ಬಳಸಿದ ವೇಳೆ ಕಾಡಾನೆಗಳಿಂದ ಜನರಿಗೆ ತೊಂದರೆ ಆಗದಂತೆ ಕಾಪಾಡಲು ಕಾಡಾನೆಗಳ ಸುಳಿವನ್ನು ಪತ್ತೆ ಮಾಡಲು ಕಾಡಾನೆಗಳನ್ನು ಸಾಕಾನೆಗಳ ಮೂಲಕ ಸೆರೆಹಿಡಿದು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸವ ಕಾರ್ಯಾಚರಣೆಯಲ್ಲಿ ಸಾಕಾನೆಯ ತಂಡದ ನಾಯಕನಾದ ಅರ್ಜುನ ಕಾಡಾನೆಯ ತಿವಿತಕ್ಕೆ ಸಾವನ್ನಪ್ಪಿರುವುಸು ನೋವಿನ ಸಂಗತಿಯಾಗಿದೆ. ಇದರಿಂದ ನಮ್ಮ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದ್ದು ಇದಕ್ಕೆ ಕಾರಣವಾಗಿರುವ ಅಧಿಕಾರಿಗಳನ್ನು ಸರ್ಕಾರ ಈ ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು. ಕಾಡಾನೆಗಳನ್ನು ಸೆರೆ ಮಾಡಿ ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸುವ ವೇಳೆ ಕಾಡಾನೆಗಳಿಗೆ ಅರವಳಿಕೆ ಮದ್ದು ನೀಡಲಾಗುತ್ತದೆ.
