ಉದಯವಾಹಿನಿ, ಇಂಡಿ: ತಾಲೂಕಿನ ಬಬಲಾದ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಬಬಲಾದ,ಹಳಗುಣಕಿ ಗ್ರಾಮಗಳಿಗೆ ಮತ್ತು ಅಡವಿ ವಸತಿಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಿಡಿಒ ಬಸವರಾಜ ಬಿರಾದಾರ ತಿಳಿಸಿದ್ದಾರೆ.
ಹಂಜಗಿ ಕೆರೆಯಿಂದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಪಾಯಿಪ್ ಲಾಯಿನ್ ಕನೆಕ್ಸನ್ ನೀಡಲಾಗಿದೆ. ಅದಲ್ಲದೆ ಅಡವಿ ವಸ್ತಿಯಲ್ಲಿ ಬರುವ ನಿವಾಸಿಗಳಿಗೆ ಮನೆ ಗಳಿಗೆ ಇಲ್ಲವೆ ಅಲ್ಲಿ ನೀರು ಸಂಗ್ರಹಾಗಾರದ ಸ್ಥಳಕ್ಕೆ ಕನೆಕ್ಷನ್ ನೀಡಲಾಗಿದೆ. ಅದಲ್ಲದೆ ಬಬಲಾದ ಮತ್ತು ಹಳಗುಣಕಿ ಗ್ರಾಮಸ್ಥರಿಗೂ ಅಲ್ಲಲ್ಲಿ ನೀರು ಸಂಗ್ರಹಿಸಿ ಪೂರೈಸಲಾಗುತ್ತದೆ ಎಂದು ಬಿದಾರಾರ ತಿಳಿಸಿದ್ದಾರೆ. ಗ್ರಾ.ಪಂ ಅಧ್ಯಕ್ಷ ಸುನೀಲಕುಮಾರ ಬಿರಾದಾರ,ಉಪಾಧ್ಯಕ್ಷೆ ನೀಲಾವತಿ ದಶವಂತ, ಸದಸ್ಯರಾದ ಸಿದರಾಯಗೌಡ ಬಿರಾದಾರ,ಯಲಗೊಂಡ ಪೂಜಾರಿ,ತುಕಾರಾಮ ದಶವಂತ,ಶ್ರೀಶೈಲ ಮಾದರ,ಲತಾ ಇಂಡಿ ಮತ್ತು ಎಲ್ಲ ಸದಸ್ಯರ ಸಹಕಾರದಿಂದ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!