ಉದಯವಾಹಿನಿ, ಸೇಡಂ : ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮುಕ್ತ ಸ್ವಾಗತವಿದೆ, ಇಲ್ಲಿ ಜಾತಿ ಭೇದ ತಾರತಮ್ಯವಿಲ್ಲ
ಆದರೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ತಮ್ಮ
ಯಾವುದು ವಯಕ್ತಿಕ ಕಾರಣಕ್ಕೆ ಆರ್ ಎಸ್ ಎಸ್ ನ್ನು ಟೀಕಿಸುತ್ತಿದ್ದಂತೆ ಕಾಣುತ್ತಿದೆ ಎಂದು ಬಿಜೆಪಿ ಎಸ್ಸಿ
ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ರಾಜಕೀಯ ಹೊರತಾಗಿ
ನೋಡಬೇಕು ಎಂಬುದು ನನ್ನ ಅಭಿಪ್ರಾಯ, ನಾನು ಸಾಕಷ್ಟು ಸಂದರ್ಭದಲ್ಲಿ ಸಂಘದ ಹಿರಿಯ ಪ್ರಮುಖರನ್ನು
ನೇರವಾಗಿ ಭೇಟಿಯಾಗಿ ಬಂದಿದ್ದೇನೆ, ನಾಗಪುರದ ಆರ್ ಎಸ್ ಎಸ್ ಕಚೇರಿಗೆ ನಾನು ಕೂಡ ಹೋಗಿದ್ದೆ
ಗೂಳಿಹಟ್ಟಿ ಹೇಳಿದ ಹಾಗೆ ಯಾವ ಪ್ರಶ್ನೆಯು ನನಗೆ ಕೇಳಲಿಲ್ಲ. ಕಾರ್ಯಾಲಯಕ್ಕೆ ಜಾತಿ
ಜನಾಂಗದವರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ.
