ಉದಯವಾಹಿನಿ, ದಾವಣಗೆರೆ: ನಟಿ ಲೀಲಾವತಿಯವರು ‘ತುಂಬಿದ ಕೊಡ’ ಚಲನ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದಾವಣಗೆರೆಗೆ ಆಗಮಿಸಿದ್ದರು. ದಾವಣಗೆರೆಯ ನಗರ ಸಭೆಯ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ ಜೆ ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು,
ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತ್ತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯ ಎಲ್ಲವು ಚಿತ್ರೀಕರಣವಾಗಿತ್ತು, ನಾನು ಆಗ ಇದನ್ನೆಲ್ಲ ನೋಡಿದ್ದೆ ಈ ಚಿತ್ರಕ್ಕಾಗಿ ಜನಪ್ರಿಯ ಹಾಡು ‘ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ….” ಎನ್ನುವುದನ್ನು ಪಿ ಕಾಳಿಂಗ ರಾಯರು ಹಾಡಿರುವುದು. ಈ ಚಲನ ಚಿತ್ರದಲ್ಲಿ ಲೀಲಾವತಿಯವರ ಜೊತೆ ರಾಜಕುಮಾರ್ ಜಯಂತಿ ಹಾಗೂ ನಮ್ಮ ನಗರದ ಚಿಂದೋಡಿ ಲೀಲಾ ಮುಂತಾದವರು ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಮೇಲಿನ ಚಿತ್ರದಲ್ಲಿ ಲೀಲಾವತಿಯವರು ನಗರಸಭೆ ಎದುರು ಬರುತ್ತಿರುವುದು ಹಾಗೂ ಎರಡನೆಯ ಚಿತ್ರದಲ್ಲಿ ಪಿಜೆ ಬಡಾವಣೆಯ ರಾಮ ದೇವಸ್ಥಾನದ ಎದುರು ಬರುತ್ತಿರುವುದು.

Leave a Reply

Your email address will not be published. Required fields are marked *

error: Content is protected !!