ಉದಯವಾಹಿನಿ, ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ಈಡಿಗ ಸಮಾವೇಶ ನಡೆಯಲಿದೆ ಈ ವಿಚಾರವಾಗಿ ಬಿ.ಕೆ .ಹರಿಪ್ರಸಾದ ಅವರನ್ನು ಕಡೆಗಣಿಸಲಾಗಿದೆ,ಸಿದ್ದರಾಮಯ್ಯ ಅವರು ಬಿ.ಕೆ.ಹರಿಪ್ರಸಾದ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕರು ಪ್ರಬಲ ನಾಯಕರಾಗಿ ಬೆಳೆಯಬಾರದು ಎಂಬ ಉದ್ದೇಶದಿಂದ ಮೂಲೆಗುಂಪು ಮಾಡುತ್ತಿದ್ದಾರೆ.ಹರಿಪ್ರಸಾದ್ ಅವರನ್ನು ದ್ದೇಶಪೂರ್ವಕವಾಗಿ ಸಮಾವೇಶದಿಂದ ದೂರ ಇಡಲಾಗಿದೆ. ಮಧು ಬಂಗಾರಪ್ಪ ಅವರನ್ನು ಬಳಸಿಕೊಂಡು ಸಿಎಂ ಸಿದ್ದರಾಮಯ್ಯ ಸಮಾಜದ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
