ಉದಯವಾಹಿನಿ, ಆನೇಕಲ್: ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿರುವ ಗುರುಕುಲ ಇಂಟರ್ ನ್ಯಾಷನಲ್ ವಿದ್ಯಾಸಂಸ್ಥೆ ಆವರಣದಲ್ಲಿ ಪಿ.ಇ.ಎಸ್. ವಿಶ್ವ ವಿದ್ಯಾಲಯ ಆಸ್ಪತ್ತೆ ಮತ್ತು ಹೆನ್ನಾಗರ ಗ್ರಾಮ ಪಂಚಾಯಿತಿ ಮತ್ತು ಗುರುಕುಲ ಇಂಟಲ್ ನ್ಯಾಷನಲ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಭಿರಕ್ಕೆ ಶ್ರೀ ಮದ್ ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿಚವಾರ್ಯ ಸ್ವಾಮಿಗಳು ಮತ್ತು ಗಣ್ಯರು ತಮ್ಮ ಅಮೃತ ಹಸ್ತದಿಂದ ದೀಪ ಬೆಳಗಿಸಿ ಕಾರ್ಯಕ್ರಮಕಕ್ಕೆ ಚಾಲನೆ ನೀಡಿದರು. ಹಾಗೆಯೇ ನಾರಾಯಣ ಹೃದಯಾಲಯದಿಂದ ರಕ್ತದಾನ ಶಿಭಿರವನ್ನು ಸಹ ಆಯೋಜಿಸಲಾಗಿತ್ತು.
