ಉದಯವಾಹಿನಿ,ದೇವನಹಳ್ಳಿ: ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸೈಕಲ್ ಪೂರಕವಾಗಿದೆ ಎಂದು ರೋಟರಿ ರಾಜ್ ಮಹಲ್ ವಿಲ್ಲಾಸ್ ಮಾಜಿ ಅಧ್ಯಕ್ಷ ಸಂಜಯ್ ಕೃಷ್ಣ ತಿಳಿಸಿದರು.ತಾಲ್ಲೂಕಿನ ಕೊಯಿರಾ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಕಳೆದ ವರ್ಷ ವಿದ್ಯಾರ್ಥಿನಿಯರಿಗೆ ಮಕ್ಕಳಿಗೆ ಸೈಕಲ್ ವಿತರಿಸಲಾಗಿತ್ತು.
ಹಾಗೆಯೇ ಈ ಬಾರಿ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಅನುಕೂಲವಾಗಲಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಇದೆ. ಶಾಲೆ ಆವರಣದಲ್ಲಿ ಈಗಾಗಲೇ ಸಸಿ ನೆಟ್ಟು ಪರಿಸರ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಗ್ರಾಮಸ್ಥ ಚಿಕ್ಕೇಗೌಡ ಮಾತನಾಡಿ, ಸೈಕಲ್ ಪಡೆದು ಸಮಯಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಶಾಲೆಗೆ ಬರಬೇಕಾಗಿದೆ ಎಂದರು.
