ಉದಯವಾಹಿನಿ, ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನನಗೆ ಸಿಎಂ ಸಿದ್ದರಾಮಯ್ಯ ಅಷ್ಟೇನೂ ಪರಿಚಯವೇ ಇಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಿಜವಾಗಿಯೂ ನನಗೆ ಸಿಎಂ ಸಿದ್ದರಾಮಯ್ಯ ಅಷ್ಟೇನೂ ಪರಿಚಯವಿಲ್ಲ, ನಾನು ಯಾವತ್ತೂ ಮ್ಯಾಚ್ ಫಿಕ್ಸಿಂಗ್ ರಾಜಕೀಯ ಮಾಡಿದವನಲ್ಲ ಎಂದು ಟಾಂಗ್ ನೀಡಿದ್ದಾರೆ.
ಅನಗತ್ಯವಾಗಿ ಸಮಾವೇಶಗಳನ್ನು ಮಾಡುವ ಬದಲು ಯಾವ ಕಾರಣಕ್ಕಾಗಿ ಅಧಿಕರಕ್ಕೆ ಬಂದಿದ್ದೇವೆ ಅದನ್ನು ಈಡೇರಿಸಬೇಕು. ಅದನ್ನು ಬಿಟ್ಟು ಒಂದೊಂದೇ ಸಮವೇಶಗಳನ್ನು ಮಾಡುತ್ತಾ ಕಾಲಹರಣ ಮಾಡುವುದರ ಅಗತ್ಯವೇನು? ರಾಜಕೀಯ ಕುತಂತ್ರಗಳಿಗೆ ನಾನು ಬಗ್ಗುವವನಲ್ಲ ಎಂದು ಗುಡುಗಿದ್ದಾರೆ.
ಈಡಿಗ ಸಮಾವೇಶ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ದೊಡ್ಡ ದೊಡ್ಡವರು ಈಡಿಗ ಸಂಘ ಕಟ್ಟಿದ್ದಾರೆ. ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ? ರಾಜಕೀಯ ಕುತಂತ್ರದಿಂದ ಸಮಾವೇಶ ಮಾಡಲಾಗುತ್ತಿದೆ. ಇದರಿಂದ ಒಳ್ಳೆಯದಾಗಲ್ಲ. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾನು ಭಾಗಿಯಾಗಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!