ಉದಯವಾಹಿನಿ, ಹುಳಿಯಾರು: ಮಿಶ್ರ ಬೆಳೆ ಪದ್ಧತಿಯಿಂದ ಕೃಷಿ ಲಾಭದಾಯಕವಾಗಿದ್ದು, ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ ಹಾಗೂ ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ಬಿಳೆಗೆರೆ ತಿಳಿಸಿದರು.
ಅಣೆಕಟ್ಟೆ ಗ್ರಾಮದ ರಘುರಾಮ್ ತೋಟದಲ್ಲಿ ತಿಪಟೂರು ವಲಯ ಅಕ್ಷಯಕಲ್ಪ ಬಳಗದಿಂದ ಶನಿವಾರ ನಡೆದ ಕೃಷಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಒಂದೇ ಬೆಳೆಗೆ ಜೋತು ಬೀಳದೆ ಅರಣ್ಯ ಕೃಷಿ ಸೇರಿದಂತೆ ವಿವಿಧ ಕೃಷಿ ವಿಧಾನಗಳ ಕಡೆ ಗಮನ ಹರಿಸಬೇಕು ಎಂದರು.
ಪ್ರಗತಿಪರ ಕೃಷಿಕ ಶಿವನಂಜಯ್ಯ, ಬಾಳೆಕಾಯಿ ದ್ರವರೂಪಿ ಗೊಬ್ಬರ, ಹೊದಿಕೆ, ಕೃಷಿ ಯಂತ್ರೋಪಕರಣ, ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಕಾಫಿ, ಮೆಣಸು ಕೃಷಿ ಹೇಗಿರಬೇಕು ಮತ್ತು ಬಯೋಚಾರ್ ಬಳಕೆ ಕುರಿತಂತೆ ಮಾಹಿತಿ ನೀಡಿದರು.
ಕೃಷಿಕ ವಿಶ್ವನಾಥ್ ಅಲದಹಳ್ಳಿ, ಸಾವಯವ ಉತ್ಪನ್ನಗಳ ಸದ್ಬಳಕೆ ಮಾಡಿಕೊಂಡು ಗೊಬ್ಬರ ತಯಾರಿಕೆ, ಎಳನೀರು ಮಾರಾಟ ಮಾಡುವುದರಿಂದ ರೈತರಿಗೆ ಆಗುವ ಉಪಯೋಗ, ವಾಣಿಜ್ಯ ಬೆಳೆಗಳ ಲಾಭ ಕುರಿತು ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!