ಉದಯವಾಹಿನಿ, ಬೆಳಗಾವಿ: ಬೆಂಗಳೂರಿನಲ್ಲಿ ಸರ್ಕಾರದ ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಸರ್ಕಾರಿ ಬಿಡಿಎ, ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಸರ್ಕಾರೀ ಜಮೀನುಗಳ ಅತಿಕ್ರಮಣ ತೆರವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿವೆ ಮತ್ತು ತಮ್ಮ ಸರಕಾರವೂ ಆ ಪ್ರಕ್ರಿಯೆಯನ್ನು ಜಾರಿಯಲ್ಲಿಡುತ್ತದೆ ಎಂದು ಹೇಳಿದರು.
ಬಿಡಿಎ ಮತ್ತು ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಶಿವಕುಮಾರ್ ಹೇಳಿದರು. ಕ್ಷೇತ್ರದ ಶಾಸಕ ಮುನಿಯಪ್ಪ ತಮ್ಮ ಕ್ಷೇತ್ರದಲ್ಲಿ ವಾರ್ಡ್ ನಂ. ೭೩ ರಲ್ಲಿ ೨ ಎಕರೆಯ ಪಾರ್ಕ್ ಜಾಗ ಒತ್ತುವರಿಯಾಗಿದೆ. ಕೆಲವರು ಪಾರ್ಕ್‌ಗೆ ಬೋರ್ಡ್ ಹಾಕಿದ್ದು ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ. ಪ್ರಮೋದ್ ಲೇಔಟ್‌ನಲ್ಲಿ ೨ ಎಕರೆ ವಿಸ್ತೀರ್ಣದಲ್ಲಿರುವ ಮತ್ತೊಂದು ಪಾರ್ಕ್‌ನಲ್ಲಿದ್ದ ಸಲಕರಣೆಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪ್ರಭಾವಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

Leave a Reply

Your email address will not be published. Required fields are marked *

error: Content is protected !!