ಉದಯವಾಹಿನಿ, ಬೆಂಗಳೂರು: ವಿಧಾನಸಭೆಯಲ್ಲಿ ೨೦೨೩-೨೪ ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳ ಪ್ರಸ್ತಾಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ.
ಹೆಚ್ಚುವರಿ ವೆಚ್ಚಗಳಿಗೆ ಸದನದ ಅಂಗೀಕಾರ ಪಡೆಯಲು ಒಟ್ಟು ೩೫೪೨.೧೦ ಕೋಟಿ ರೂ ಮೊತ್ತದ ಪೂರಕ ಅಂದಾಜುಗಳ ಪ್ರಸ್ತಾವಗಳನ್ನು ಮುಖ್ಯಮಂತ್ರಿಗಳು ಮಂಡಿಸಿದರು.
ಹಲವು ಇಲಾಖೆಗಳಲ್ಲಿ ಹೆಚ್ಚುವರಿ ವೆಚ್ಚಗಳ ಪೂರಕಗಳ ಅಂದಾಜು ಪ್ರಸ್ತಾವಗಳಿದ್ದು,ಶಾಸಕರಿಗೆ ಹೊಸ ಕಾರುಗಳ ಖರೀದಿಗೆ ಹೆಚ್ಚುವರಿಯಾಗಿ ೪ ಕೋಟಿ ರೂಡಿಸಿಎಂ ಮತ್ತು ಮಂತ್ರಿಗಳ ಕಚೇರಿಗಳ ವೆಚ್ಚಕ್ಕೆ ಹೆಚ್ಚುವರಿಯಾಗಿ ೨.೭೧ ಕೋಟಿ ರೂ,ವಿಷ್ಣು ಸ್ಮಾರಕಕ್ಕೆ ಹೆಚ್ಚುವರಿಯಾಗಿ ೭೫.೪೭ ಲಕ್ಷ ರೂ,ದಸರಾ ಆಚರಣೆಗೆ ಹೆಚ್ಚುವರಿಯಾಗಿ ೮.೫ ಕೋಟಿ ರೂ,ದಸರಾ ಸಿಎಂ ಕಪ್ ಗೆ ೪.೮೫ ಕೋಟಿ ರೂ,೨೦೨೨-೨೩ ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ೭.೩೦ ಕೋಟಿ ರೂಗಳಾಗಿದೆ.

Leave a Reply

Your email address will not be published. Required fields are marked *

error: Content is protected !!