ಉದಯವಾಹಿನಿ, ಬೀದರ್: ಪ್ರತಿ ವರ್ಷದಂತೆ ಈ ವರ್ಷವೂ ಕೂq ಬೀದರ್ ತಾಲೂಕಿನ ಕಮಠಾಣಾ ಗ್ರಾಮದಲ್ಲಿÀ ಡಿ.14, 15 ಮತ್ತು 16 ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಹಾಗೂ ಮಹಾ ರಥೋತ್ಸವ ಆದ್ದೂರಿಯಾಗಿ ಜರುಗಲಿದೆ.
ಡಿ. 14 ವರೆಗೆ ನಿತ್ಯ ಬೆಳಗ್ಗೆ ರುದ್ರಾಭಿಷೇಕ, ಸಾಯಂಕಾಲ ಬೆಳ್ಳುರ ಶ್ರೀ ಸಚ್ಚಿದಾನಂದ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಮಾತೋಶ್ರೀ ಅಮೃತಾನಂದಮಯಿ ಇವರಿಂದ ಪ್ರವಚನ ನಡೆಯುವುದು.
ಡಿ.13 ರಂದು ರಂದು ಬೆ. 8 ಗಂಟೆಗೆ ಪೂಜ್ಯ ಶ್ರೀ ಷ.ಬ್ರ. ರಾಜೋಟೆಶ್ವರ ಶಿವಾಚಾರ್ಯರು ಇವರಿಂದ ಧ್ವಜಾರೋಹಣ ಹಾಗೂ ಸಾಯಂಕಾಲ ಭಜನ ಸಂಗೀತ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಕ್ರೀಕೆಟ್ ಪಂದ್ಯಾವಳಿ ನಡೆಯಲಿದೆ.
ಡಿ.14 ರಂದು ಸಾಮೂಹಿಕ ಲಕ್ಷ ಬಿಲ್ವಾರ್ಚಣೆ, ಸಾಮೂಹಿಕ ದೀಪೆÇೀತ್ಸವ ಹಾಗೂ ಸಾಯಂಕಾಲ ಶ್ರೀ ವೀರಭದ್ರೇಶ್ವರ ವೈಭವದ ಪಲ್ಲಕಿ ಉತ್ಸವ ನಡೆಯಲಿದೆ. ಡಿ.15 ರಂದು ಬೇಳಗ್ಗೆ ಅಗ್ಗಿ ಪೂಜೆ ಮಹಾರಥೋತ್ಸವ, ಮಧ್ಯಾಹ್ನ ಧರ್ಮ ಸಭೆ ಹಾಗೂ ಮಹಾರಥೋತ್ಸವ
ಮತ್ತು ಮಹಾ ಪ್ರಸಾದ ನಡೆಯುವುದು ನಂತರ ಧರ್ಮ ಸಮಾರಂಭ ಸುಕ್ಷೇತ್ರದ ಹಾರಕೂಡ ಸಂಸ್ಥಾನದ ಹಿರೇಮಠದ ಶ್ರೀ ಷ.ಬ್ರ ಡಾ. ಚನ್ನವೀರ ಶಿವಾಚಾರ್ಯರಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು.
