ಉದಯವಾಹಿನಿ, ಸಿರುಗುಪ್ಪ: ನಗರದ ಶ್ರೀ ಶ್ರೀನಿವಾಸ ಆಂಜನೇಯ ಶನೈಶ್ಚರ ದೇವಸ್ಥಾನದಲ್ಲಿ ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ರಾಜೇಂದ್ರ ತೀರ್ಥರ ಪೂರ್ವಾದಿ ಮಠದ ಸೊಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾ ಮನೋಹರ ತೀರ್ಥರಿಂದ ಸಂಸ್ಥಾನ ಪೂಜೆ ಶುಕ್ರವಾರ ನಡೆಯಿತು.
ನಂತರ ಆಶೀರ್ವಚನ ನೀಡಿದ ಶ್ರೀಗಳು ಧರ್ಮ ಮತ್ತು ಆಚಾರಗಳನ್ನು ನಾವು ನಿರಂತರವಾಗಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯ ಇಂದು ಹೆಚ್ಚಾಗಿದೆ, ಅಧುನಿಕ ಯುಗದಲ್ಲಿರುವ ನಾವು ಆಧ್ಯಾತ್ಮಿಕದ ಕಡೆಗೆ ಹೆಚ್ಚು ಒಲವನ್ನು ತೋರಿಸಬೇಕು, ನಿಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಮನೆಯಲ್ಲಿ ನಮ್ಮ ದೇಶದ ಅಚಾರ ವಿಚಾರ, ಸಂಸ್ಕೃತಿ ಹೇಳಿಕೊಡಬೇಕು, ಆಗ ಮಾತ್ರ ಉತ್ತಮವಾದ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶ್ರೀ ಬನ್ನಂಜೆ 1008 ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖಂಡರಾದ ಡಾ.ಜೋಯಿಸ್ ಶ್ರೀನಿವಾಸ ಮೂರ್ತಿ, ಕೆ. ಹೆಚ್ ನಾರಾಯಣರಾವ್, ಜೆ. ಸಂಜಯಾಚಾರ್, ವೈ.ಪ್ರಹ್ಲಾದ ರಾವ್, ಕುಲಕರ್ಣಿ ರಾಘವೇಂದ್ರ, ಜೆ ನರಸಿಂಹಮೂರ್ತಿ, ಹೆಚ್ ಕೆ ಪ್ರಾಣೇಶ ರಾವ್, ರಾಜೇಂದ್ರ ನಾಯಕ್, ಕೆ.ಮಧ್ವಾಚಾರ್, ಕಿಶೋರ್ ಕುಮಾರ್, ರಮೇಶ ಕುಲಕರ್ಣಿ, ಬಿ ರಾಘವೇಂದ್ರ ಚಾರ್, ಹೆಚ್. ಜೆ ಶ್ರೀಧರ, ಹೆಚ್ ಪ್ರಕಾಶ ರಾವ್ ಇನ್ನಿತರರು ಇದ್ದರು.
