ಉದಯವಾಹಿನಿ, ಕೋಲಾರ: ನಗರದ ಅದಿದೇವತೆ ಕೋಲಾರಮ್ಮ ದೇವಾಲಯಕ್ಕೆ ಶುಕ್ರವಾರ ಸಂಜೆ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು, ತಮ್ಮ ಪುತ್ರಿಯ ಜನ್ಮ ದಿನಾಚರಣೆಯ ಪ್ರಯುಕ್ತ ಅವರು ದೇವಾಲದಲ್ಲಿ ಪೂಜೆ ಸಲ್ಲಿಸಿದರು,
ಈ ಸಂದರ್ಭದಲ್ಲಿ ಅವರು ಮಾದ್ಯಮದವರೊಂದಿಗೆ ಸದನದಲ್ಲಿ ನಡೆದ ಘಟನೆಉ ಕುರಿತು ಅರೋಪಿಗಳನ್ನು ಹಿಡಿಯುವಲ್ಲಿ ನಾನು ,ಕಟೀಲ್ ಸೇರಿದಂತೆ ೩-೪ ಮಂದಿ ಯಶಸ್ವಿಯಾದೇವು ಎಂದು ವಿವರಿಸಿದರು.
ಶ್ರೀನಿವಾಸಪುರದಲ್ಲಿ ಬಿಜೆಪಿ ಪಕ್ಷದ ವಿಕಸಿತ ಭಾರತದ ರಥಯಾತ್ರೆಯು ೪ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ನೆರವೇರಿತು ಎಂದ ಅವರು ಈಗಾಗಲೇ ನೀವು ಕೇಳುವಂತ ಲೋಕಸಭೆ ಹಾಗೂ ಮೈಸೂರಿನ ವಿಮಾನ ನಿಲ್ದಾಣದ ವಿಚಾರಗಳಿಗೆ ಈಗಾಗಲೇ ಪ್ರತಿಕ್ರಿಯಿಸಿದ್ದೇನೆ ಎಂದರು,
ಶ್ರೀನಿವಾಸಪುರದಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರೈತರಿಗೆ ಅಗಿರುವ ಅನ್ಯಾಯದ ಕುರಿತು ಪಾರ್ಲಿಮೆಂಟ್‌ನಲ್ಲೂ ಪ್ರಸ್ತಾಪಿಸಿರುವೆ ಈ ಕುರಿತು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲಿದೆ ಎಂದರು,
