ಉದಯವಾಹಿನಿ, ಬೆಂಗಳೂರು: ಆಹಾರ ಅರಸಿ ಹಾಡಿನಿಂದ ಮಹಾನಗರಿ ಬೆಂಗಳೂರಿನ ನಗರದೊಳಗೆ ಬಂದಿರುವ ಜಿಂಕೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದೆ. ಈ ಘಟನೆ ಕೋರಮಂಗಲದ 100 ಫೀಟ್ ರಸ್ತೆಯಲ್ಲಿ ನಡೆದಿದೆ.
ನಗರದೊಳಗೆ ಬಂದಿದ್ದ ಜಿಂಕೆ ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವನ್ನಪ್ಪಿದ್ದು, ಆರ್ಮಿ ಫೋರ್ಸ್ ರಸ್ತೆ ಬಳಿ ಘಟನೆ ನಡೆದಿದೆ. ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಅಪಘಾತ ನಡೆದ ಜಾಗಕ್ಕೆ ಗ್ರೀನ್ ಆರ್ಮಿ ಫೋರ್ಸ್ ಧಾವಿಸಿ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಜಿಂಕೆ ಕೊನೆಯುಸಿರೆಳೆದಿತ್ತು. ಜಿಂಕೆಯ ಮೃತದೇಹವನ್ನು ಜಾಗೃತದಳ ರಣ್ಯ ಇಲಾಖೆಗೆ ಶಿಫ್ಟ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!