ಉದಯವಾಹಿನಿ, ಬೆಂಗಳೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಇದೆ ಡಿಸೆಂಬರ್ ೨೯ ಮತ್ತು ೩೦ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ನಡೆಯುವ ೩ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ
ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲಾಧ್ಯಕ್ಷ ವಿ. ಸುರೇಶ್ ಮಾತನಾಡಿ, ಕುವೆಂಪು ಅವರ ಜನ್ಮದಿನದ ವೈಚಾರಿಕ ದಿನದಂದು ವೈಜ್ಞಾನಿಕ ಸಮ್ಮೇಳನ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ್ ಲಕ್ಷ್ಮಣ್‌ರಾವ್ ಜಾರಕಿಹೊಳಿ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಅಂದು, ರೇವಾ ವಿಶ್ವವಿದ್ಯಾಲಯದ ಡಾ. ಮಂಜುಳಾ ಕೆ.ಆರ್.ವಿಜ್ಞಾನ ಸೇವೆಗಾಗಿ ರಾಜ್ಯಮಟ್ಟದ ಡಾ. ಎಚ್.ಎನ್ ಪ್ರಶಸ್ತಿ ನೀಡಲಾಗುವುದು. ಜೊತೆಗೆ, ರಾಜ್ಯದ ಎಲ್ಲಾ ಜಿಲ್ಲೆಗಳ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಡಾಕ್ಟರ್ ಎಚ್ ನರಸಿಂಹಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು . ಸಚಿವ ಎನ್.ಎಸ್ ಬೋಸರಾಜು ವಿಜ್ಞಾನ ಸಿರಿ ಮಾಸಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಡಾ. ಶ್ರೀರಾಮಚಂದ್ರ ತಿಳಿಸಿದರು.
