ಉದಯವಾಹಿನಿ, ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಕಡೆ ಕೋವಿಡ್ ಆತಂಕ ಮನೆ ಮಾಡಿದರೆ, ಇನ್ನೊಂದು ಕಡೆ ಹಲವು ಜನರಲ್ಲಿ ಕೆಮ್ಮು ಕಾಣಿಸಿಕೊಂಡಿದೆ.ಬೆಂಗಳೂರಿನಲ್ಲಿ ಶೇ.30-35 ರಷ್ಟು ಮಂದಿಗೆ ಕ್ರಾನಿಕ್ ಕಾಫ್ ಹರಡಿದೆ ಎಂದು ಹೇಳಲಾಗಿದೆ. ಮಹಾಮಾರಿ ಕೋವಿಡ್ ಭೀತಿ ನಡುವೆ ಈ ‘ಕ್ರಾನಿಕ್ ಕಾಫ್’ ಎಂದು ಹೇಳಲಾಗಿರುವ ಈ ಕೆಮ್ಮು ವೇಗವಾಗಿ ಗಾಳಿಯಲ್ಲಿ ಹರಡುತ್ತಿದೆ .
ಅದರಲ್ಲೂ ಮಕ್ಕಳಲ್ಲಿ ಹಾಗೂ ವೃದ್ದರಲ್ಲಿ ಈ ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೆಮ್ಮು ಎಂದು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕೆಮ್ಮುವಿನ ಜೊತೆ ವೈರಲ್ ಇನ್ಪೆಕ್ಷನ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು, ಎಲ್ಲರೂ ಮಾಸ್ಕ್ ಧರಿಸೋದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.ವಾಹನಗಳ ತೀವ್ರ ಧೂಳು, ಹೊಗೆಯಿಂದ ಈ ತರಹದ ಕೆಮ್ಮುಗಳು ಬರುತ್ತದೆ ಎಂದು ಹೇಳಲಾಗಿದೆ.

ದೀರ್ಘಕಾಲದ ಕ್ರಾನಿಕ್ ಕಾಫ್ ಕೆಮ್ಮು ಇದು ಕನಿಷ್ಠ ಎಂಟು ವಾರಗಳವರೆಗೆ ಇರುತ್ತದೆ, ಮತ್ತು ಹೆಚ್ಚಾಗಿ ಹೆಚ್ಚು ಕಾಲ ಇರುತ್ತದೆ. ಕೆಮ್ಮು ಅನೇಕ ಶ್ವಾಸಕೋಶದ ಕಾಯಿಲೆಗಳ ಸಾಮಾನ್ಯ ಲಕ್ಷಣವಾಗಿದ್ದರೂ, ದೀರ್ಘಕಾಲದ ಕೆಮ್ಮು ಯಾವಾಗಲೂ ಮತ್ತೊಂದು ಕಾಯಿಲೆ ಅಥವಾ ಸ್ಥಿತಿಗೆ ಸಂಬಂಧಿಸಿಲ್ಲ ಮತ್ತು ಇದು ಹೆಚ್ಚಾಗಿ ಚಿಕಿತ್ಸೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!