ಉದಯವಾಹಿನಿ, ಬೆಂಗಳೂರು: ದೇಶದಲ್ಲಿ 350 ವರ್ಷಗಳ ಕಾಲ ಬಳಸಬಹುದಾದಷ್ಟು ಕಲ್ಲಿದ್ದಲಿದ್ದರೂ ನಾವು ವಿದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ 2025-26ರ ಹೊತ್ತಿಗೆ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಿದ್ದೇವೆ ಎಂದು ಕೇಂದ್ರ ಗಣಿ. ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಎಜುಕೇಷನ್ ಪ್ರಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್‌ಐ) ಮತ್ತು ಕಾಮೆಡ್-ಕೆ ಆಯೋಜಿಸಿದ್ದ ‘ಜಾಗತಿಕ ಸ್ಪರ್ಧಾತ್ಮಕವಾಗಿ ಭಾರತೀಯ ಉನ್ನತ ಶಿಕ್ಷಣವನ್ನು ರೂಪಿಸುವುದು’ ಎಂಬ ಎರಡು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ಕಲ್ಲಿದ್ದಲು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದೆ. ಆಗ ನಮ್ಮ ದೇಶದಲ್ಲಿ ಎಷ್ಟು ಕಲ್ಲಿದ್ದಲು ಲಭ್ಯವಿದೆ ಎಂದು ನಮ್ಮ ಅಧಿಕಾರಿಗಳನ್ನು ಕೇಳಿದೆ. ಅವರು ಇಂದಿನ ಬಳಕೆಯ ದರದಲ್ಲಿ 350 ವರ್ಷಗಳ ಕಾಲ ಬಳಸಬಹುದಾದಷ್ಟು ಕಲ್ಲಿದ್ದಲಿದೆ ಎಂದು ಮಾಹಿತಿ ನೀಡಿದರು. ಆದರೆ ನಾವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ! 2025-26ರ ಹೊತ್ತಿಗೆ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಿದ್ದೇವೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
