ಉದಯವಾಹಿನಿ, ಕೋಲಾರ: ಹನುಮನ ದೇವಾಲಯಗಳ ತವರೂರು ಎಂದೇ ಖ್ಯಾತವಾಗಿರುವ ಕೋಲಾರ ಜಿಲ್ಲೆಯಲ್ಲಿ ಹನುಮದ್ವ್ರತವನ್ನು ಹನುಮಜಯಂತಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ, ಇಂದು ಮುಕ್ಕೋಟಿ ದ್ವಾದಶಿಯೂ ಆಗಿರುವುದು ವಿಶೇಷವಾಗಿದ್ದು, ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ,ಭಜನೆ, ಅನ್ನದಾಸೋಹ ನಡೆದಿದ್ದು, ಭಕ್ತರ ಸಮೂಹವೇ ಹರಿದು ಬಂತು.
ಹನುಮಂತನಿಗೂ ಕೋಲಾರಕ್ಕೂ ಇರುವ ಸಂಬಂಧ ಆಶ್ರ‍್ಯ ತರಿಸುವಂತದ್ದು, ಏಕೆಂದರೆ ಜಿಲ್ಲೆಯಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹನುಮಂತ ದೇವಾಲಯಗಳನ್ನು ಗಮನಿಸಿದರೆ ಇಂಥಹದ್ದೊಂದು ಅನುಮಾನ ಕಾಡದಿರದು, ಹನುಮದ್ವ್ರತವಾದ ಇಂದು ಜಿಲ್ಲೆಯಲ್ಲಿ ಹನುಮ ಜಯಂತಿಯಾಗಿ ಆಚರಿಸುವುದು ವಾಡಿಕೆಯಾಗಿದೆ.
ಹನುಮಜಯಂತಿ ಅಂಗವಾಗಿ ಎಲ್ಲಾ ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ,ಭಜನೆ ಮುಂಜಾನೆಯಿಂದಲೇ ನಡೆಯುತ್ತಿದ್ದು, ಸಹಸ್ರಾರು ಮಂದಿ ದೇವಾಲಯಗಳಿಗೆ ತೆರಲಿ ಸ್ವಾಮಿಯ ರ‍್ಶನ ಪಡೆದರು.
ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಹತ್ತಾರು ಹನುಮಂತ ದೇವಾಲಯಗಳ ಜೊತೆಗೆ ಹೊಸ ಬಡಾವಣೆಗಳಲ್ಲಿಯೂ ನರ‍್ಮಿಸಲ್ಪಟ್ಟಿರುವ ಅನೇಕ ಹನುಮಂತ ದೇವಾಲಯಗಳು ಕೋಲಾರ ಜಿಲ್ಲೆಯಲ್ಲಿವೆ.
ಗಲ್ಲಿಗೊಂದು ರಸ್ತೆ ಬದಿಯ ಕನಿಷ್ಟ ಪ್ರತಿ ೨ ರಿಂದ ೩ ಕಿ.ಮೀ.ಗೊಂದು ಹನುಮನ ದೇವಾಲಯವನ್ನು ಕಾಣಬಹುದಾಗಿದೆ. ನಗರದಲ್ಲಿಯಂತೂ ಹನುಮಾನ್ ಜಯಂತಿಯಂದು ಪ್ರತಿ ರಸ್ತೆಯಲ್ಲಿಯೂ ಪೂಜೆ, ಭಜನೆ, ರಥೋತ್ಸವ ನಡೆಯುತ್ತಿರುವುದು ವಿಶೇಷವೆನಿಸಿದೆ.
ಕೋಲಾರ ನಗರವನ್ನು ಬೆಂಗಳೂರು ಕಡೆಯಿಂದ ಪ್ರವೇಶಿಸುವಾಗ ಎಪಿಎಂಸಿ ಮಾರುಕಟ್ಟೆ ಮುಂಭಾಗ ಮೊಟ್ಟ ಮೊದಲಿಗೆ ಸಿಗುವುದೇ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯ.
ಕೋಲಾರದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ಭಕ್ತಾಧಿಗಳು ಕೊಂಡರಾಜನಹಳ್ಳಿ ಆಂಜನೇಯನಿಗೆ ಕೈಮುಗಿದು ಮುಂದೆ ಸಾಗಿದರೆ ಕೋಲಾರಕ್ಕೆ ಬರುವವರು ಕೊಂಡರಾಜನಹಳ್ಳಿ ಹನುಮಂತನಿಗೆ ನಮಿಸಿಯೇ ಪ್ರವೇಶಿಸುವ ವಾಡಿಕೆ ಇದೆ.
