ಉದಯವಾಹಿನಿ, ಕೂಡ್ಲಿಗಿ: ಪಕ್ಷವು ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೆ ನಿಭಾಯಿಸಿಕೊಂಡು ಬಿಜೆಪಿ ಪಕ್ಷದ ಏಳ್ಗೆಗೆ ಸಂಘಟಿಸುವ ಮೂಲಕ ಸದಾ ಶ್ರಮಿಸುವೆ ಎಂದು ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಿನ್ನೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಬಿ ಜೆ ಪಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಸಮಾಜ ಸೇವೆ ಮತ್ತು ಪಕ್ಷದ ಸಂಘಟನೆ ಕೆಲಸಗಳನ್ನು ಗುರುತಿಸಿ ಎಸ್ ಟಿ ಮೋರ್ಚಾ ರಾಜ್ಯ ಅದ್ಯಕ್ಷ ರನ್ನಾಗಿ ನೇಮಿಸಿ ಆದೇಶ ಪ್ರತಿ ನೀಡಿದ್ದಾರೆ.
ಅವರು ನನ್ನನು ಗುರುತಿಸಿ ಪಕ್ಷದ ಎಸ್ಟಿ ಮೋರ್ಚಾ ರಾಜ್ಯ ಸಂಘಟನೆ ಜವಾಬ್ದಾರಿ ನೀಡಿದ್ದು ಪಕ್ಷದ ನಿಷ್ಠೆಯಲ್ಲಿ ಸಮುದಾಯದ ಸಂಘಟನೆ ಮಾಡಿ ಮುಂದಿನ ದಿನದಲ್ಲಿ ಬಿಜೆಪಿ ಅಧಿಕಾರ ಬರಲು ಇಂದಿನಿಂದಲೇ ಶ್ರಮಿಸುವೆ ಎಂದು ತಿಳಿಸಿದರು.
ಹಾಗೂ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷರಾಗುವಲ್ಲಿ ನನಗೆ ಬೆನ್ನುತಟ್ಟಿ ಸಹಕಾರ ನೀಡುವ ಕರ್ನಾಟಕ ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ, ಭಾರತಿಯ ಜನತಾ ಪಕ್ಷದ ಹಿರಿಯ ಮುಖಂಡರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಿಗೆ ಹಾಗೂ ಬಿಜೆಪಿ ಯ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಚಿರಋಣಿಯಾಗಿರುವೆ ಎಂದು ಬಂಗಾರು ಹನುಮಂತು ತಿಳಿಸಿದರು.ಇದೇ ಸಂದರ್ಭದಲ್ಲಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದಂತೆ ಮಹಿಳಾ ಬಿಜೆಪಿ ಹಿರಿಯ ಮುಖಂಡರಾದ ಮಾಳವಿಕ ಅವಿನಾಶ ಸೇರಿದಂತೆ ಇತರರು ಹೂಗುಚ್ಛ ನೀಡಿ ಶುಭ ಹಾರೈಕೆ ಸಲ್ಲಿಸಿದರು.
