ಉದಯವಾಹಿನಿ, ಬೆಂಗಳೂರು: 2023-24ನೇ ಸಾಲಿನ ಬಜೆಟ್‌ನಲ್ಲಿ ೋಷಿಸಿದ್ದಂತೆ ಕುಡಿಯುವ ನೀರು ಮತ್ತು ಶೌಚ ಗೃಹ ನಿರ್ವಹಣೆಗಾಗಿ ಹಾಗೂ ಶಾಲೆಯ ಇತರೆ ನಿರ್ವಹಣೆಗೆ ಖರ್ಚು ಭರಿಸಲು 43.52 ಕೋಟಿ ರೂ.ಗಳನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
1ರಿಂದ 50 ಮಕ್ಕಳಿರುವ ಶಾಲೆಗೆ 20 ಸಾವಿರ ರೂ., 51ರಿಂದ 100 ಮಕ್ಕಳಿರುವ ಶಾಲೆಗೆ 28 ಸಾವಿರ ರೂ., 101ರಿಂದ 500 ಮಕ್ಕಳಿರುವ ಶಾಲೆಗೆ 33 ಸಾವಿರ ರೂ. ಮತ್ತು 500ಕ್ಕೂ ಹೆಚ್ಚಿನ ಮಕ್ಕಳಿರುವ ಶಾಲೆಗೆ 45 ಸಾವಿರ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆ-2ನಲ್ಲಿ ಬಿಲ್ ಸಿದ್ಧಪಡಿಸಿ ಶಾಲೆಗಳ ಬ್ಯಾಂಕ್‌ಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ನಿರ್ವಹಣಾ ವೆಚ್ಚದ ಸಾಮಾಗ್ರಿಗಳ ಪೂರೈಕೆ ಮಾಡಿದ ಮತ್ತು ನಿರ್ವಹಣಾ ಸೇವೆಯನ್ನು ಪಡೆದ ಬಗ್ಗೆ ಸಂಬಂಧಿಸಿದ ವೋಚರ್‌ಗಳನ್ನು ಮುಖ್ಯ ಶಿಕ್ಷಕರಿಂದ ಪಡೆದು ಸೇವೆ ನೀಡಿದವರ ಹೆಸರಿಗೆ ನೇರವಾಗಿ ಪಾವತಿಸುವಂತೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!