ಉದಯವಾಹಿನಿ, ಬೆಂಗಳೂರು : ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮುಂದಿನ ಮುಖ್ಯಮಂತ್ರಿ ಕೂಗು ಅವಾಗವಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ರಾಮನಗರದ ಮಾಗಡಿ ತಾಲೂಕಿನಲ್ಲಿ ನಡೆದ ಅಂಬೇಡ್ಕರ್ ಹಬ್ಬ ರ್ಯಾಲಿಯಲ್ಲಿ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಘೋಷಣೆಗಳು ಮೊಳಗಿದೆ.ಪರಮೇಶ್ವರ್ ಬೆಂಬಲಿಗರು ರ್ಯಾಲಿಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.
ಪರಮೇಶ್ವರ್ ಅಣ್ಣಂಗೆ ಜೈ , ಮುಂದಿನ ಸಿಎಂ ಪರಮೇಶ್ವರ್ ಸಾಬೇಬ್ರಿಗೆ ಜೈ ಎಂದು ಪರಮೇಶ್ವರ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ ಪರಮೇಶ್ವರ್ ಮೈಕ್ ಕಿತ್ತುಕೊಂಡಿದ್ದಾರೆ.
