ಉದಯವಾಹಿನಿ ಕಲಬುರಗಿ: ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುವ ನಿಟ್ಟಿನಲ್ಲಿ ಲಂಚ ಪಡೆಯುತ್ತಿದ್ದಾಗ ಜೇವರ್ಗಿ ಸಿಪಿಐ ಮತ್ತು ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಲೋಕಾಯುಕ್ತ ಎಸ್ಪಿ ಕರ್ನೂಲ್, ಡಿವೈ ಎಸ್ ‌ಪಿ ಸಿದ್ದಣ್ಣಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ದೃವತಾರಾ, ಸಿಬಂದಿ ಪ್ರದೀಪ್, ಸಿದ್ದಲಿಂಗ ದಾಳಿ ನಡೆಸಿದ್ದಾರೆ.30 ಸಾವಿರ ಲಂಚ ಪಡೆಯುತ್ತಿದ್ದ ಜೇವರ್ಗಿ ಸಿಪಿಐ ಶಿವಪ್ರಸಾದ ಮಠದ್ ಮತ್ತುಎಸ್‌ಪಿ ಕರ್ತವ್ಯ ಮಾಡುವ ಪೊಲೀಸ್ ಪೇದೆ ಶಿವರಾಯ, ಸಿಪಿಐ ವಾಹನ ಚಾಲಕ ಅವ್ವಣ್ಣ ಎಸಿಬಿ ಬಲೆಗೆ ಬಿದ್ದವರು.ಮರಳು ಸಾಗಿಸಲು ಅನುಮತಿ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಖಿಲ್ ಎಂಬುವವರು ಹಣವನ್ನು ಕೊಡಲು ನಂದಿಕೂರ ಬಳಿ ಬಂದಾಗ ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದು, ಜೇವರ್ಗಿ ಸರ್ಕ್ಯೂಟ್ ಹೌಸ್‌ನಲ್ಲಿ ವಿಚಾರಣೆ ನಡೆಸಿದ್ದಾರೆ.ಜೇವರ್ಗಿ ಠಾಣೆಯ ಎಸ್‌ಬಿ ಸಿಬ್ಬಂದಿ ಶಿವರಾಯ ಮರುಳು ಮಾಫಿಯಾದಿಂದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದು, ಈಹಣ ಸಿಪಿಐಗೆ ಕೊಡಲು ಪಡೆದಿದ್ದಾಗಿ ತಿಳಿದಿದೆ.ನಂತರ ಲೋಕಾಯುಕ್ತ ಅಧಿಕಾರಿಗಳು, ಶಿವರಾಯನಿಂದ ಸಿಪಿಐ ಶಿವಪ್ರಸಾದ ಮಠದ ಅವರಿಗೆ ಪೋನ್ ಮೂಲಕ ಮಾತನಾಡಿಸಿದ್ದಾರೆ. ಈ ವೇಳೆ ಹಣ ತೆಗೆದುಕೊಳ್ಳಲು ಬರುವಂತೆ ಸೂಚಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಸಿಪಿಐ ಹಾಗೂ ವಾಹನ ಚಾಲಕ ಡ್ರೆೈವರ್ ಅವಣ್ಣ ತೆರಳುತ್ತಿದ್ದಾಗ ನಂದಿಕೂರ ಬಳಿ ಅವರನ್ನು ಲೋಕಾಯುಕ್ತ ಪೊಲೀಸ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!