ಉದಯವಾಹಿನಿ, ಬೆಂಗಳೂರು : ಬಿಎಂಟಿಸಿ ( ಬೆಂಗಳೂರು ಮಹಾನಗರ ಸಾರಿಗೆ) ನೂತನ ಎಂಡಿಯಾಗಿ ಆರ್ ರಾಮಚಂದ್ರನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಈ ಹಿಂದಿನ ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಿ ಬಿಎಂಟಿಸಿ ನೂತನ ಎಂಡಿಯಾಗಿ ಆರ್ ರಾಮಚಂದ್ರನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ನೌಕರರ ಸಮಸ್ಯೆಗಳಿಗೆ ಎಂಡಿ ಸತ್ಯವತಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ , ಅವರನ್ನು ವರ್ಗಾವಣೆ ಮಾಡುವಂತೆ ಸಾರಿಗೆ ಸಚಿವರಿಗೆ ಸಾಕಷ್ಟು ದೂರುಗಳು ಬಂದಿತ್ತು, ಈ ಹಿನ್ನೆಲೆ ಅವರಿಗೆ ಯಾವುದೇ ಹುದ್ದೆ ತೋರಿಸದೇ ಅವರನ್ನು ವರ್ಗಾವಣೆ ಮಾಡಿ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ನೂತನ ಎಂಡಿಯಾಗಿ ಆರ್ ರಾಮಚಂದ್ರನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
