ಉದಯವಾಹಿನಿ, ಮಂಡ್ಯ: ಸುಮಲತಾ ಅಂಬರೀಶ್​ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಮತ್ತೆ ಸ್ಪರ್ಧಿಸುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್​ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ.
ಕಳೆದ ನಾಲ್ಕು ವರ್ಷದಿಂದ ಸುಮಲತಾ ಅಂಬರೀಶ್​ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ಸುಮಲತಾ ಅಭ್ಯರ್ಥಿ ಆಗಿರುತ್ತಾರೆ. ಮೈಶುಗರ್ ಕಾರ್ಖಾನೆ ಪುನಾರಾರಂಭ ಮಾಡಲು ಯಶಸ್ವಿಯಾಗಿದ್ದಾರೆ. ಕೆಆರ್‌ಎಸ್‌ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಸೇರಿದಂತೆ ಎಲ್ಲಾ ಹೋರಾಟಗಳಲ್ಲೂ ಸುಮಲತಾ ಮುಂಚೂಣಿಯಲ್ಲಿದ್ದಾರೆ ಎಂದರು. ಇನ್ನು ಅತಿ ಹೆಚ್ಚು ದಿಶಾ ಸಭೆ ನಡೆಸಿದ ಹೆಗ್ಗಳಿಕೆ ಸುಮಲತಾ ಅವರದ್ದು. ಚುನಾವಣೆಯಲ್ಲಿ ಬಿಜೆಪಿಗೆ ಸುಮಲತಾ ಅಂಬರೀಶ ಅವರು ಬಾಹ್ಯ ಬೆಂಬಲ ಕೊಟ್ಟಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಆಗಿದೆ. ಜೆಡಿಎಸ್ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂಬ ಚರ್ಚೆ ಆಗುತ್ತಿದೆ. ಸುಮಲತಾ ಈಗಲೂ ಪಕ್ಷೇತರ ಸಂಸದೆ, ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪಕ್ಷ ಯಾವುದಾದರೂ ಸುಮಲತಾ ಅಂಬರೀಶ್‌ ಅವರು ಮಂಡ್ಯ ಅಭ್ಯರ್ಥಿ ಆಗಿರಬೇಕು ಎಂದು ಆಗ್ರಹಿಸಿದರು. ಮುನಿಸು ಮರೆತ್ರಾ ಹೆಚ್‌ ಡಿ ಕುಮಾರಸ್ವಾಮಿ: ಸುಮಲತಾ ಭೇಟಿಯಾಗುತ್ತೇನೆ ಎಂದು ಹೆಚ್ಡಿಕೆ ಹೇಳಿದ್ಯಾಕೆ? ಸುಮಲತಾ ಅಂಬರೀಶ್ ಅವರು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರೂ ನಮ್ಮ ಬೆಂಬಲ ಇರುತ್ತದೆ. ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಟ್ಟರೂ ಸುಮಲತಾ ಅಂಬರೀಶ ಸ್ಪರ್ಧೆ ಖಚಿತವಾಗಿದೆ. ಬಿಜೆಪಿ ಮಂಡ್ಯ ಉಳಿಸಿಕೊಳ್ಳುವ ವಿಶ್ವಾಸವಿದೆ. ಸುಮಲತಾ ಅವರ ಅವಶ್ಯಕತೆ ಇದ್ದರೆ ಮಂಡ್ಯ ಕ್ಷೇತ್ರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇನ್ನು ಬಿಜೆಪಿ ಮಂಡ್ಯವನ್ನ ಜೆಡಿಎ ಬಿಟ್ಟು ಕೊಟ್ಟರೂ ಸಹ ಸುಮಲತಾ ಅವರ ಸ್ಪರ್ಧೆ ಖಚಿತವಾಗಿದೆ. ಆದರೆ ಬಿಜೆಪಿ ಮಂಡ್ಯ ಉಳಿಸಿಕೊಳ್ಳುವ ವಿಶ್ವಾಸ ಇದೆ. ಹಳೇ ಮೈಸೂರು ಭಾಗದಲ್ಲಿ ಬಲಿಷ್ಠ ಬಿಜೆಪಿ ಕಟ್ಟುವ ಆಸೆ ಇದ್ರೆ, ಸುಮಲತಾ ಅವರ ಅವಶ್ಯಕತೆ ಇದ್ರೆ ಮಂಡ್ಯವನ್ನು ಉಳಿಸಿಕೊಳ್ಳುತ್ತಾರೆ. ಅಂಬರೀಶ್‌ರವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು.

Leave a Reply

Your email address will not be published. Required fields are marked *

error: Content is protected !!