
ಉದಯವಾಹಿನಿ, ಬಳ್ಳಾರಿ: ತಮ್ಮ ಗೆಲುವು ಮತ್ತು ಪಕ್ಷಗಳಿಂದ ಸ್ಪರ್ಧೆಗೆ ಟಿಕೆಟ್ ಪಡೆಯಲು ಜಿಲ್ಲೆಯ ಸಂಡೂರು ತಾಲೂಕಿನ ಜೋಗದ ಬೆಟ್ಟ ಪ್ರದೇಶದಲ್ಲಿರುವ ಸಾಧು ರಾಜಭಾರತಿ ಸ್ವಾಮಿಗಳ ಆಶೀರ್ವಾದವನ್ನು ರಾಜಕಾರಣಿಗಳು ಪಡೆಯುತ್ತಾರೆ.
ಈಗಾಗಲೇ ಜಿಲ್ಲೆಯವರೇ ಆದ ಶ್ರೀರಾಮುಲು ಶ್ರೀಗಳನ್ನು ಭೇಟಿ ಮಾಡಿ ತಮ್ಮ ಸ್ಪರ್ಧೆಗೆ ಆಶಿರ್ವಾದ ಪಡೆದುಬಂದಿದ್ದಾರೆ.
ಈಗ ಉತ್ತರ ಕನ್ನಡದ ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ತಮಗೆ ಈಬಾರಿ ಟಿಕೆಟ್ ಕೈತಪ್ಪುವ ಭೀತಿ ಹಿನ್ನಲೆಯಲ್ಲಿ. ದೇವರಕೊಳ್ಳದ ನಾಗಾಸಾಧು ದಿಗಂಬರ ರಾಜ ಭಾರತಿ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆಂದು ಹೇಳಲಾಗುತ್ತದೆ. ಇಲ್ಲಿಗೆ ಬಂದು ಆಶೀರ್ವಾದ ಪಡೆದ್ರೆ, ಗೆಲ್ತಾರೆ ಅನ್ನೋ ನಂಬಿಕೆ ಹಿನ್ನಲೆ ಚುನಾವಣೆ ಮುನ್ನ ಹಲವು ನಾಯಕರು ಬರುತ್ತಾರೆ. ಈಗಾಗಲೇ ಬಳ್ಳಾರಿ ಲೋಕಸಭೆಗೆ ಸ್ಪರ್ಧೆ ಮಾಡಲು ಯತ್ನಿಸುತ್ತಿರೋ ಶ್ರೀರಾಮುಲು, ಉಗ್ರಪ್ಪ ಭೇಟಿ ನೀಡಿದ್ದಾರೆ.
ಇದೀಗ ಅನಂತ ಕುಮಾರ ಹೆಗಡೆ ಭೇಟಿ ನೀಡಿದ್ದಾರೆ.
ಈ ಹಿಂದೆ ಡಿಕೆಶಿ, ಸಂತೋಷ ಲಾಡ್, ಅನಿಲ್ ಲಾಡ್, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ತುಕಾರಾಂ ಸೇರಿದಂತೆ ರಾಜ್ಯದ ಹಲವು ನಾಯಕರು ಭೇಟಿ ನೀಡಿದ್ದರು.
