ಉದಯವಾಹಿನಿ, ಬೆಂಗಳೂರು: ನೂರೈವತ್ತು ವರ್ಷಗಳಿಗೂ ಹೆಚ್ಚು ಕಾಲ, ಭಾರತೀಯ ಅಂಚೆ ಸೇವೆಯು ದೇಶದ ಸಂವಹನದ ಬೆನ್ನೆಲುಬಾಗಿದೆ ಹಾಗೂ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಭಾರತ ಅಂಚೆ ಆಯೋಜಿಸಿದ್ದ “ಕರ್ನಾಪೆಕ್ಸ್-೨೦೨೪ ಅಂಚೆ ಚೀಟಿಗಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಲಕ್ಷದ ಅರವತ್ತು ಸಾವಿರ ಅಂಚೆ ಕಚೇರಿಗಳೊಂದಿಗೆ, ಭಾರತದ ಅಂಚೆ, ದೇಶದ ಮೂಲೆ ಮೂಲೆಗೆ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಸಾರ್ವಜನಿಕರಿಗೆ ಅವರ ಮನೆ ಬಾಗಿಲಿಗೆ ತನ್ನ ಸೇವೆಗಳನ್ನು ಒದಗಿಸುತ್ತಿದೆ. ಭಾರತೀಯ ಅಂಚೆ ಜಾಲವು ವಿಶ್ವದಲ್ಲೇ ಅತಿ ದೊಡ್ಡ ಜಾಲವಾಗಿದೆ. ಅಂಚೆ ಸೇವೆಗಳ ಡಿಜಿಟಲೀಕರಣ ಮತ್ತು ವಿಶೇಷವಾಗಿ ಕೊನೆಯ ಮೈಲಿ ಬಳಕೆದಾರರಿಗೆ ಉ೨ಅ ಸೇವೆಗಳ ವರ್ಧನೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಅಂಚೆ ಕಛೇರಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ ಎಂದರು.
ಪ್ರಾಚೀನ ಕಾಲದಲ್ಲಿ, ಅಂಚೆ ಸೇವೆಯನ್ನು ರಾಜರು ಮತ್ತು ರಾಜಮನೆತನದವರು ಮಾತ್ರ ಬಳಸುತ್ತಿದ್ದರು. ಆ ಸಮಯದಲ್ಲಿ, ಪತ್ರಗಳು ಮತ್ತು ಸಂದೇಶಗಳನ್ನು ಕಳುಹಿಸುವ ಕೆಲಸವನ್ನು ಅವರ ವಿಶೇಷ ಸಂದೇಶವಾಹಕರು ಅಥವಾ ಪಾರಿವಾಳಗಳು ಇತ್ಯಾದಿಗಳ ಮೂಲಕ ಮಾಡಲಾಗುತ್ತಿತ್ತು.ಬಳಕೆಯಲ್ಲಿರುವ ಅಂಚೆಚೀಟಿಗಳ ಬದಲಿಗೆ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ನಿರ್ಧಾರದಲ್ಲಿ, ೧೦ ಜನವರಿ ೧೮೪೦ ರಂದು ಅಂಚೆ ಚೀಟಿಯನ್ನು ಕಂಡುಹಿಡಿಯಲಾಯಿತು, ಅದು ಒಂದು ಪೆನ್ನಿ ಮೌಲ್ಯದ್ದಾಗಿತ್ತು ಮತ್ತು ಅದನ್ನು ಔಪಚಾರಿಕವಾಗಿ ೦೬ ಮೇ ೧೮೪೦ ರಂದು ಬಿಡುಗಡೆ ಮಾಡಲಾಯಿತು. ಭಾರತದಲ್ಲಿ ಮೊದಲ ಅಂಚೆ ಚೀಟಿಯನ್ನು ೧೮೫೪ ರಲ್ಲಿ ಬಿಡುಗಡೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!