ಉದಯವಾಹಿನಿ, ರಾಯಚೂರು: ಜಿಲ್ಲಾ ವೀರಶೈವ ಸಮಾಜದ ಎಚ್‌ಸಿಎಂಎಸ್‌ಕೆ ಪದವಿ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎಸ್‌ಸಿಎಸ್‌ಎ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ೨೦೨೩/೨೪ನೇ ಸಾಲಿನ ವಾರ್ಷಿಕ ವಿಶೇಷ ಎನ್.ಎನ್.ಎಸ್ ಶಿಬಿರವನ್ನು ಹುಣಸಿಹಾಳ ಹುಡ ಗ್ರಾಮದಲ್ಲಿ ಹಮ್ಮಿಕೊಳ್ಳಯಿತು.
ನಾಲ್ಕನೇ ದಿನದ ದೈನಂದಿನ ಚಟುವಟಿಕೆಯಲ್ಲಿ ಸ್ವಯಂ ಸೇವಕ ವಿದ್ಯಾರ್ಥಿಗಳಿಂದ ಶ್ರಮದಾನವನ್ನು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣವನ್ನು ಸ್ವಚ್ಛತೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಚ್‌ಸಿಎಂಎಸ್‌ಕೆ ಶಿಕ್ಷಣ ಮಾವಿದ್ಯಾಲಯದ ಕಾರ್ಯದರ್ಶಿ ಗಿರಿಮಲ್ಲಪ್ಪ ಕರಡಕಲ್ ಹಾಗೂ ಕೆ.ಎಂ.ನೀಲಕಂಠ ರಾವ್ ಪಾಟೀಲ್ ಹಾಗೂ ಜನಾರ್ಧನ್ ರೆಡ್ಡಿ ಹಂಚಿನಾಳ ಜಿಲ್ಲಾ ವೀರಶೈವ ಸಮಾಜದ ಕಾರ್ಯಕಾರಣಿ ಸದಸ್ಯರು, ಊರಿನ ಗಣ್ಯರು ಮತ್ತು ಕಾಲೇಜಿನ ಪ್ರಾಂಶುಪಾಲರುಗಳು ಹಾಗೂ ಸ್ವಯಂಸೇವಕ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಹಾಗೂ ಸಾಗರ್ ಸುದರ್ಶನ ಮತ್ತು ಸುರೇಶ ಎಲ್ಲಾ ಸ್ವಯಂಸೇವಕರುಗಳು ಉತ್ಸಾಹದಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!