
ಉದಯವಾಹಿನಿ, ತುಮಕೂರು: ನಗರದ ಹೊರವಲಯದ ಹೀರೆಹಳ್ಳಿ ಸಮೀಪ ರಾಯರಪಾಳ್ಯ ಗ್ರಾಮದ ಇಟ್ಟಿಗೆ ಗೂಡಿನ ಒಳಗೆ ಅಡಗಿದ್ದ ಸುಮಾರು ೮ ಅಡಿ ಉದ್ದದ ಹೆಬ್ಬಾವನ್ನು ವಾರ್ಕೊ ಸಂಸ್ಥೆಯವರು ರಕ್ಷಣೆ ಮಾಡಿದ್ದಾರೆ.
ಗ್ರಾಮದ ನಿವಾಸಿ ಪ್ರತಾಪ್ ಎಂಬುವರಿಗೆ ಸೇರಿದ ಇಟಿಗೆ ಗೂಡಿನಲ್ಲಿ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಭಯ ಭೀತರಾಗಿದ್ದ ಇಟ್ಟಿಗೆ ಗೂಡಿನ ಕಾರ್ಮಿಕರು ತಕ್ಷಣ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.ತಕ್ಷಣ ಪ್ರತಾಪ್ ರವರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ದೂರವಾಣಿ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ.ಸುದ್ದಿ ತಿಳಿದ ಕೂಡಲೇ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ, ಚೇತನ್ ಮತ್ತು ಸ್ಯಾಮ್ಯುಯೆಲ್ ರವರು ಸ್ಥಳಕ್ಕೆ ಧಾವಿಸಿ ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯಾಧಿಕಾರಿ ಮಾರ್ಗದರ್ಶನದಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಹಾವುಗಳ ರಕ್ಷಣೆ ಮಾಡಲು ವಾರ್ಕೋ ಸಂಸ್ಥೆಯ ಸಹಾಯವಾಣಿ ೯೯೬೪೫೧೯೫೭೬ ಕರೆ ಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದ್ದಾರೆ.
