ಉದಯವಾಹಿನಿ, ಕೋಲಾರ: ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಯುವಜನತೆ ಪಾಲಿಸುವ ಮೂಲಕ ಸಮಾಜದಲ್ಲಿ ಬೇರೂರಿರುವ ಅಸಮಾನತೆ ಮತ್ತು ಅಜ್ಞಾನವನ್ನು ತೊಡೆದು ಹಾಕೋಣ ಎಂದು ಉಪನ್ಯಾಸಕ ಆರ್. ಶಂಕರಪ್ಪ ತಿಳಿಸಿದರು.
ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಶುಕ್ರವಾರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ,ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ನೆಹರು ಯುವ ಕೇಂದ್ರ,ಶಿಕ್ಷಣ ಇಲಾಖೆ,ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಯುವ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಸ್ವಾಮಿ ವಿವೇಕಾನಂದರು ಯುವಜನತೆ ಅಸಮಾನತೆ ತೊಡೆದು ಹಾಕುವ ಹಾದಿಯಲ್ಲಿ ನಡೆಯಲು ಪ್ರೇರಕ ಶಕ್ತಿಯಾಗಿದ್ದರು. ಇಂದಿಗೂ ಅವರ ವಿಚಾರಗಳ ಮೂಲಕ ಅವರು ಯುವ ಜನತೆಯನ್ನು ಎಚ್ಚರಿಸುತ್ತಲೇ ಇದ್ದಾರೆ. ಹಾಗಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ.ಯೋಜನಾ ನಿರ್ದೇಶಕ ರವಿಚಂದ್ರನ್ ವಹಿಸಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ವಿವೇಕಾನಂದ ಜಯಂತಿ ಶುಭಾಶಯಗಳನ್ನು ಕೋರಿದರು.ಪ್ರಾಸ್ತಾವಿಕವಾಗಿ ನಾರಾಯಣ ರೆಡ್ಡಿ ಮಾತನಾಡಿದರು, ಚೈತ್ರ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಯುವಜನ ಅಧಿಕಾರಿ ಕೆ.ರಾಜೇಶ್ ಕಾರಂತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ,ತಾಲ್ಲೂಕು ಪಂಚಾಯಿತಿ ಇ.ಓ.ಮುನಿಯಪ್ಪ, ಜಿ.ಪಂ.ಡೆಪ್ಯೂಟಿ ಸೆಕ್ರೆಟರಿ ಶಿವಕುಮಾರ್, ಪ್ರಾಂಶುಪಾಲ ಗಂಗಾಧರ್,ಸ್ವೀಪ್ ಸಮಿತಿಯ ಮುಖ್ಯಸ್ಥ ಗೋವಿಂದ ಗೌಡ,ಯೋಗ ಶಿಕ್ಷಕ ರವಿಕುಮಾರ್,,ದಿಷಾ ಸಮಿತಿ ಸದಸ್ಯ ಅಪ್ಪಿ ನಾರಾಯಸ್ವಾಮಿ ಮುಂತಾದವರು ಉಪಸ್ಥಿತರಿದ್ದು,ಹಾಗೂ ನಿರೂಪಣೆ ಕೊಂಡರಾಜನಹಳ್ಳಿ ಮಂಜುಳ ನೆರವೇರಿಸಿದರು.

 

Leave a Reply

Your email address will not be published. Required fields are marked *

error: Content is protected !!