ಉದಯವಾಹಿನಿ, ಬೆಂಗಳೂರು: ನಗರದ ವಾಹನ ಸವಾರರಿಗೆ ಮತ್ತು ಸಂಚಾರಿ ಪೊಲೀಸರಿಗೆ ತಲೆ ನೋವಾಗಿದ್ದ ಸಂಚಾರ ದಟ್ಟಣೆ ನಿರ್ವಹಣೆಗೆ ನಗರ ಸಂಚಾರಿ ಪೊಲೀಸರು ಅಸ್ತ್ರಂ(ಆಕ್ಷನಬಲ್ ಇಂಟಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜನ್ಮೆಂಟ್) ಎಂಬ ಉಪಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದಾರೆ.ಅಸ್ತ್ರಂನಲ್ಲಿ ಕನ್ವೆಷನ್ ಅಲರ್ಟ್‍ಗಳು, ಬಿಒಟಿ ಆಧಾರಿತ ಇನ್ಸಿಡೆಂಟ್ ರಿಪೋರ್ಟಿಂಗ್ ಹಾಗೂ ಇವೆಂಟ್ ಮ್ಯಾನೇಜ್‍ಮೆಂಟ್ ಮತ್ತು ಡ್ಯಾಶ್‍ಬೋರ್ಡ್ ಅನಾಲಿಟಿಕ್ಸ್‍ಗಳನ್ನು ಬಳಸಿಕೊಂಡು ದಟ್ಟಣೆಯ ಉದ್ದ, ವಾಹನಗಳ ಸಂಖ್ಯೆ, ವಾಹನಗಳ ವಿಧ, ನೈಜ್ಯ ಸಮಯದಲ್ಲಿ ದತ್ತಾಂಶವನ್ನು ಪಡೆದು ಸುಗಮ ಸಂಚಾರದ ವ್ಯವಸ್ಥೆ ಮಾಡಿಕೊಡಲಿದೆ.
