ಉದಯವಾಹಿನಿ, ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ರಾಷ್ಟ್ರಾದ್ಯಂತ ‘ಗೋಡೆ ಬರಹ’ ಅಭಿಯಾನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ಕೊಟ್ಟರು. ಬಳಿಕ ಸಂಸದರ ವಿವಾದಾತ್ಮಕ ಹೇಳಿಕೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲೇ ರಾಜಕಾರಣಿಗಳು ಅಂದ್ರೆ ಜನ ನಂಬಲ್ಲ, ಅಂಥ ಪರಿಸ್ಥಿತಿ ಇದೆ. ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ ಎಂದರು.

ನಾನು ಅವರ ಜೊತೆಗೂ ಇದರ ಬಗ್ಗೆ ಮಾತಾಡುತ್ತೇನೆ. ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು. ಇದರ ಬಗ್ಗೆ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇನೆ. ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ
ಹಾವೇರಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡ್ತಿಲ್ಲ. ಆದರೆ ಪದೇ ಪದೇ ರಾಜ್ಯದಲ್ಲಿ ಇಂಥ ಘಟನೆಗಳು ನಡೀತಿವೆ. ಘಟನೆ ನಡೆದು ವಾರವಾದರೂ ಪೊಲೀಸರು ಎಫ್‍ಐಆರ್ ಹಾಕಿರಲಿಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಇದು ಗಂಭೀರ ಪ್ರಕರಣ, ಆದರೆ ಸರ್ಕಾರ ಇದನ್ನು ಹಗುರವಾಗಿ ತಗೊಂಡಿದೆ. ಪೊಲೀಸರು ಸರ್ಕಾರದ ತಾಳಕ್ಕೆ ಕುಣಿತಿರೋದು ದುರ್ದೈವ. ಹಾವೇರಿ ಗಂಭೀರ ಪ್ರಕರಣವನ್ನು ಕಾಂಗ್ರೆಸ್ ನವರು ಉಡಾಫೆ ಮಾಡ್ತಿದ್ದಾರೆ. ಒಂದು ಹೆಣ್ಣಿನ ಬದುಕಿನ ಪ್ರಶ್ನೆ ಇದು. ಸಿಎಂ ಘಟನೆಯನ್ನು ಗಂಭೀರವಾಗಿ ನೋಡಲಿ ಎಂದರು.

Leave a Reply

Your email address will not be published. Required fields are marked *

error: Content is protected !!