ಉದಯವಾಹಿನಿ, ವಿಜಯಪುರ(ದೇವನಹಳ್ಳಿ): ಪಟ್ಟಣದ ಗುರಪ್ಪನಮಠದ ಓಂಕಾರೇಶ್ವರ ದೇವಾಲಯದಲ್ಲಿ ಸೋಮವಾರ ಮುಂಜಾನೆ ಹುಂಡಿಗಳಲ್ಲಿನ ಹಣ ಕಳವು ನಡೆದಿದೆ.
ದೇವಾಲಯದ ಮೇಲೆ ಅಳವಡಿಸಿದ್ದ ತಗಡಿನ ಶೀಟ್ ನ ಬೋಲ್ಟ್ ಗಳನ್ನು ಬಿಚ್ಚಿರುವ ಕಳ್ಳರು, ದೇವಾಲಯದೊಳಗೆ ಇಳಿದಿದ್ದಾರೆ. ದೇವಾಲಯದ ಮುಖ್ಯದ್ವಾರದ ಬಾಗಿಲಿಗೆ ಚಿಲಕ ಹಾಕಿದ್ದಾರೆ.
ನಂತರ ದೇವಾಲಯದಲ್ಲಿದ್ದ ನಾಲ್ಕು ಹುಂಡಿಗಳ ಬೀಗಗಳು ಮುರಿದು ಹಣ ಕದ್ದು ಪುನಃ ಮೇಲ್ಛಾವಣಿಯ ಮೂಲಕ ವಾ‍‍ಪಸ್‌ ಹೋಗಿದ್ದಾರೆ. ಕಳೆದ 4 ತಿಂಗಳಿನಿಂದ ಹುಂಡಿಯನ್ನು ಎಣಿಕೆ ಮಾಡಿರಲಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿರಬಹುದೆಂದು ಆಡಳಿತ ಮಂಡಳಿಯವರು ಅಂದಾಜಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಭಾನುವಾರ ತಂದು ಇಟ್ಟಿದ್ದ ₹15 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಒಡವೆ ಮುಟ್ಟಿಲ್ಲ. ದೇವಾಲಯದಲ್ಲಿನ ಪಾರ್ವತಿ ದೇವಿ ಮೂರ್ತಿ ಬಳಿಗೆ ಹೋಗಿ ಆಭರಣ ತೆಗೆಯುವ ಪ್ರಯತ್ನ ಮಾಡಿ, ವಿಫಲರಾಗಿದ್ದಾರೆ. ದೇವಿಗೆ ಹಾಕಿದ್ದ ಬಳೆಗಳು ಒಡೆದುಹೋಗಿವೆ.
ಹಬ್ಬದ ದಿನದಂದು ಬೆಳಿಗ್ಗೆ 4 ಗಂಟೆ‌ ಸಮಯದಲ್ಲಿ ಅರ್ಚಕರ ಕುಟುಂಬದವರು ದೇವಾಲಯ ಶುಚಿಗೊಳಿಸಲೆಂದು ಬಂದಾಗ ದೇವಾಲಯದ ಬೀಗ ತೆಗೆದು, ಬಾಗಿಲು ತಳ್ಳುವ ಪ್ರಯತ್ನ ಮಾಡಿದ್ದಾರೆ. ಬಾಗಿಲು ತೆರೆಯಲು ಸಾಧ್ಯವಾಗದಿದ್ದಾಗ ಗಾಬರಿಗೊಂಡ ಕುಟುಂಬದವರು ಅರ್ಚಕರಿಗೆ ವಿಚಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!